ನವದೆಹಲಿ :ಗಣರಾಜ್ಯೋತ್ಸವದ ಅಂಗವಾಗಿ ಶೌರ್ಯ ಪದಕ, ಸೇವಾ ಪದಕಗಳನ್ನು ಘೋಷಣೆ ಮಾಡಲಾಗಿದ್ದು, ಒಟ್ಟು 939 ಸಿಬ್ಬಂದಿಗಳಿಗೆ ಪದಕಗಳನ್ನು ನೀಡಲಾಗುತ್ತಿದೆ.
ಕೇಂದ್ರ ಹಾಗೂ ರಾಜ್ಯಗಳ ವಿವಿಧ ಪೊಲೀಸ್ ಪಡೆಗಳ ಸಿಬ್ಬಂದಿಗಳಿಗೆ ಪದಕಗಳನ್ನು ಪ್ರದಾನ ಮಾಡಲಾಗುತ್ತಿದ್ದು ಅತಿ ಹೆಚ್ಚಿನ ಪದಕಗಳನ್ನು (115) ಜಮ್ಮು-ಕಾಶ್ಮೀರ ಪಡೆದಿದೆ.
ಪದಕಗಳನ್ನು ಪಡೆದ ಸಿಬ್ಬಂದಿಗಳ ಹೆಸರುಗಳನ್ನು ಕೇಂದ್ರ ಗೃಹ ಸಚಿವಾಲಯ ಪ್ರಕಟಿಸಿದ್ದು, ಪೊಲೀಸ್ ಇಲಾಖೆಯಲ್ಲಿ ಸಾಧನೆ ಮಾಡಿದ ಸಿಬ್ಬಂದಿಗಳನ್ನು ಗುರುತಿಸಿ ಶೌರ್ಯ ಪದಕ, ರಾಷ್ಟ್ರಪತಿಗಳ ಪೊಲೀಸ್ ಪದಕಗಳನ್ನು ನೀಡಲಾಗುತ್ತಿದೆ.
ಇದನ್ನೂ ಓದಿ: 7 ವರ್ಷದ ಬಾಲಕಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ: ಪ್ರವಾಹ ಸಂದರ್ಭದಲ್ಲಿ ಜೀವ ಉಳಿಸುವ ಮನೆ ಸಂಶೋಧನೆ
ಈ ಪೈಕಿ 189 ಶೌರ್ಯ ಪ್ರಶಸ್ತಿಗಳನ್ನು ನೀಡಲಾಗಿದ್ದರೆ, ಈ ಪೈಕಿ 134 ಮಂದಿಗೆ ಜಮ್ಮು-ಕಾಶ್ಮೀರದಲ್ಲಿ ಶೌರ್ಯ ಸಾಧನೆ ಮಾಡಿದ್ದಕ್ಕಾಗಿ ನೀಡಲಾಗಿದೆ. 47 ಪದಕಗಳನ್ನು ತೀವ್ರಗಾಮಿ ಎಡಪಂಥೀಯ ಪೀಡಿತ ಪ್ರದೇಶಗಳಲ್ಲಿ ಶೌರ್ಯ ಪ್ರದರ್ಶಿಸಿದವರಿಗೆ ನೀಡಲಾಗಿದೆ. ಈಶಾನ್ಯ ರಾಜ್ಯದಲ್ಲಿ ಇದೇ ಮಾದರಿಯ ಕ್ರಮ ಕೈಗೊಂಡ ಓರ್ವ ಸಿಬ್ಬಂದಿಗೆ ಶೌರ್ಯ ಪದಕ ನೀಡಿ ಗೌರವಿಸಲಾಗುತ್ತಿದೆ.
ಅತಿ ಹೆಚ್ಚು ಶೌರ್ಯ ಪದಕಗಳನ್ನು ಜಮ್ಮು-ಕಾಶ್ಮೀರದ ಸಿಬ್ಬಂದಿಗಳು ಪಡೆದಿದ್ದಾರೆ. ಈ ಬಳಿಕ ಕೇಂದ್ರ ಮೀಸಲು ಪೊಲೀಸ್ ಪಡೆಯ 30 ಸಿಬ್ಬಂದಿಗಳು, ಚತ್ತೀಸ್ ಗಢದ 10 ಸಿಬ್ಬಂದಿಗಳು, 9 ಒಡಿಶಾ ಪೊಲೀಸ್ ಸಿಬ್ಬಂದಿಗಳಿಗೆ, 7 ಮಹಾರಾಷ್ಟ್ರ ಪೊಲೀಸ್ ಸಿಬ್ಬಂದಿಗಳು, ಮೂರು ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸರಿಗೆ ಶೌರ್ಯ ಪದಕ ಲಭ್ಯವಾಗಿದೆ.