ನವದೆಹಲಿ: ಸಂಸತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎಸ್ ಬಿ ಐ ಬ್ಯಾಂಕಿಗೆ 973.74 ಕೋಟಿ ರೂ ಎಕ್ಸ್ ಗ್ರೇಶಿಯಾ ನೀಡಲು ಅನುಮೋದಿಸಿದೆ.ಲಾಕ್ ಡೌನ್ ಹಿನ್ನೆಲೆಯಲ್ಲಿ ವಿತ್ತೀಯ ಸಂಸ್ಥೆಗಳಿಂದ ಸಾಲ ಪಡೆದವರಿಗೆ ಕಂತು ಪಾವತಿಯನ್ನು ನಿಗದಿತ ಅವಧಿಗೆ ಮುಂದೂಡುವಂತೆ ಕೇಂದ್ರ ಸೂಚನೆ ನೀಡಿತ್ತು.
ಕಂತು ಪಾವತಿ ಮುಂದೂಡಿಕೆಯಿಂದ ಉಂಟಾದ ಬಡ್ಡಿಯ ನಷ್ಟವನ್ನು ತುಂಬಲು ಕೇಂದ್ರ ಸರ್ಕಾರ ಹಣ ಬಿಡುಗಡೆಗೊಳಿಸಿದೆ. ಒಟ್ಟು 647.5 ಕೋಟಿ ರೂಗ಼ಳನ್ನು ಕೇಂದ್ರ ಸರ್ಕಾರ ಹಣಕಾಸು ಸಂಸ್ಥೆಗಳಿಗೆ ಎಕ್ಸ್ ಗ್ರೇಶಿಯ ನೀಡಬೇಕಿತ್ತು. ಅದರಲ್ಲಿ 5,500 ಕೋಟಿ ಹಣವನ್ನು ಇತರೆ ಹಣಕಾಸು ಸಂಸ್ಥೆಗಳಿಗೆ ನೀಡಿತ್ತು. ಅದರಲ್ಲಿ ಎಸ್ ಬಿ ಐ ಬ್ಯಾಂಕಿಗೆ 973.74 ಕೋಟಿ ರೂ. ಬಾಕಿ ಉಳಿಸಿಕೊಂಡಿತ್ತು.