ತಿರುವನಂತಪುರ: ಕೊರೊನಾ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹೇರಲಾಗಿದ್ದ ನಿರ್ಬಂಧಗಳನ್ನು ಮುಂದುವರಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಇಂದು ನಡೆದ ಕೊರೊನಾ ಪರಿಶೀಲನಾ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಭಾನುವಾರದ ಲಾಕ್‍ಡೌನ್ ಸಮಾಂತರ ನಿಯಂತ್ರಣ ಇದೇ ರೀತಿಯಲ್ಲಿ ಮುಂದುವರಿಯುತ್ತದೆ ಮತ್ತು ಸಭೆಯಲ್ಲಿ ನಿರ್ಧರಿಸಿದಂತೆ ಜಿಲ್ಲೆಗಳಲ್ಲಿ ವಿಧಿಸಲಾದ ನಿರ್ಬಂಧಗಳು ಬದಲಾಗುವುದಿಲ್ಲ.
ಆದರೆ, ಭಾನುವಾರದ ನಿಬರ್ಂಧ ಎಷ್ಟು ದಿನ ಇರುತ್ತದೆ ಎಂಬುದರ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈಗಿರುವ ನಿಬರ್ಂಧಗಳನ್ನೇ ಮುಂದುವರಿಸುವ ನಿರ್ಧಾರ ಕೈಗೊಂಡಿದ್ದು, ಅವುಗಳನ್ನು ಬಿಗಿಗೊಳಿಸಲು ಯಾವುದೇ ಹೆಚ್ಚುವರಿ ನಿಬರ್ಂಧಗಳನ್ನು ಸರ್ಕಾರ ಮುಂದಿಟ್ಟಿಲ್ಲ ಎಂಬುದು ಗಮನಾರ್ಹ. ಪರಿಶೀಲನಾ ಸಭೆಯು ಆರೋಗ್ಯ ಇಲಾಖೆ ಮುಂದಿಟ್ಟಿರುವ ಪ್ರಸ್ತಾವನೆಗಳನ್ನು ಪರಿಗಣಿಸಿದೆ ಎಂದು ತಿಳಿದುಬಂದಿದೆ.
ಭಾನುವಾರದಂದು ಅಗತ್ಯ ಸೇವೆಗಳನ್ನು ಮಾತ್ರ ಅನುಮತಿಸಿ ನಿಬರ್ಂಧಗಳು ಜಾರಿಯಲ್ಲಿರುತ್ತವೆ. ಒಂದರಿಂದ ಒಂಬತ್ತನೇ ತರಗತಿಗಳು ಆನ್‍ಲೈನ್ ಕಲಿಕೆಯ ವಿಧಾನದೊಂದಿಗೆ ಮುಂದುವರಿಯುತ್ತವೆ. ಮುಂದಿನ ದಿನಗಳಲ್ಲಿ ಕೊರೊನಾ ಪ್ರಕರಣಗಳ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಪರಿಶೀಲನಾ ಸಭೆಯಲ್ಲಿ ನಿಯಮಾವಳಿಗಳನ್ನು ಬದಲಾಯಿಸಲಾಗುವುದು ಎಂದು ವರದಿಯಾಗಿದೆ.