. .
ಕಣ್ಣೂರು: ಕಣ್ಣೂರಿನಲ್ಲಿ ಚಲಿಸುತ್ತಿದ್ದ ಬಸ್‌ಗೆ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ. ಕಣ್ಣೂರು ಕೇಂದ್ರ ಕಾರಾಗೃಹದ ಬಳಿ ಈ ಘಟನೆ ನಡೆದಿದೆ. ಪುದಿಯ ತೆರು ಎಂಬಲ್ಲಿಂದ ಕಣ್ಣೂರಿಗೆ ಬರುತ್ತಿದ್ದ ಬಸ್ ಪೊಡಿಕುಂಡು ತಲುಪಿದಾಗ ಏಕಾಏಕಿ ಹೊಗೆ ಕಾಣಿಸಿಕೊಂಡಿತು ಎನ್ನಲಾಗಿದೆ.
ಇದನ್ನು ಗಮನಿಸಿದ ಪ್ರಯಾಣಿಕರು ಬಸ್‌ನಿಂದ ಕೆಳಗಿಳಿದಿದ್ದಾರೆ. ಕೆಲವೇ ಕ್ಷಣಗಳಲ್ಲಿ ಬೆಂಕಿ ಉರಿಯತೊಡಗಿತು. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಬಸ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಪಲಿಯಾತ್ ವಳಪ್ಪು-ಕಣ್ಣೂರು ಮಾರ್ಗವಾಗಿ ಸಂಚರಿಸುತ್ತಿದ್ದ ಮಾಯಾಸ್ ಬಸ್‌ಗೆ ಬೆಂಕಿ ತಗುಲಿದೆ.
ಬೆಳಗ್ಗೆ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಅಗ್ನಿಶಾಮಕ ದಳದ ಎರಡು ಘಟಕಗಳು ಆಗಮಿಸಿ ಬೆಂಕಿಯನ್ನು ಹತೋಟಿಗೆ ತಂದಿವೆ. ವಿದ್ಯುತ್ ತಂತಿಗೆ ಸ್ಪರ್ಶಿಸಿ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಪ್ರಾಥಮಿಕ ತೀರ್ಮಾನವಾಗಿದೆ.