ಕಾಸರಗೋಡು: ಅಶೋಕನಗರ ಶ್ರೀ ವಿಷ್ಣುಮೂರ್ತಿ-ರಕ್ತೇಶ್ವರೀ ದೈವಗಳ ಪುನ:ಪ್ರತಿಷ್ಠಾ ಕಾರ್ಯಕ್ರಮದ ಅಂಗವಾಗಿ ಬಾಲಾಲಯ ಪ್ರತಿಷ್ಠೆ ಜರುಗಿತು. ತಂತ್ರಿವರ್ಯ ಆರಿಕ್ಕಾಡಿ ಶಂಕರನಾರಾಯಣ ಕಡಮಣ್ಣಾಯ ಬಾಲಾಲಯ ಪ್ರತಿಷ್ಠೆ ನೆರವೇರಿಸಿದರು.
ಕ್ಷೇತ್ರದ ಅರ್ಚಕ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕುಂಜರಕಾನ ನವೀನ್ ಭಟ್ ಪ್ರಾಸ್ತಾವಿಕ ಮಾತುಗಳನ್ನಡಿದರು. ಕ್ಷೇತ್ರ ಸಮಿತಿ ಪದಾಧಿಖಾರಿಗಳು, ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು, ಭಕ್ತಾದಿಗಳು ಪಾಲ್ಗೊಂಡಿದ್ದರು. ಈ ಸಂದರ್ಭ ಕ್ಷೇತ್ರ ಜೀರ್ಣೋದ್ಧಾರ ಸಮಿತಿ ಸಭೆ ನಡೆಯಿತು. ಕ್ಷೇತ್ರದ ಜೀರ್ಣೋದ್ಧಾರ ಕೆಲಸಗಳನ್ನು ಶೀಘ್ರ ಆರಂಭಿಸಲೂ ಸಭೆ ತೀರ್ಮಾನಿಸಿತು.