ತಿರುವನಂತಪುರ: ಕೊರೊನಾ ಮೂರನೇ ಅಲೆ ಎದುರಿಸಲು ಆರೋಗ್ಯ ಇಲಾಖೆ ಸನ್ನದ್ಧವಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ರಾಜ್ಯದಲ್ಲಿನ ಕೊರೋನಾ ಚಿಕಿತ್ಸಾ ಬಿಕ್ಕಟ್ಟಿನ ಸುದ್ದಗಳ ಬಗ್ಗೆ ಉತ್ತರಿಸಿದ ಸಚಿವರು, ಔಷಧಿಗಳು ಮತ್ತು ಅಗತ್ಯ ಸೌಲಭ್ಯಗಳು ಎಲ್ಲೆಡೆ ಇವೆ ಎಂದು ಹೇಳಿದರು. ವೈದ್ಯಕೀಯ ಕಾಲೇಜುಗಳಲ್ಲಿ ಯಾವುದೇ ಬಿಕ್ಕಟ್ಟು ಇಲ್ಲ ಎಂದು ಸಚಿವರು ಹೇಳಿದರು. ಇಂತಹ ವದಂತಿಗಳು ಆಧಾರ ರಹಿತ ಎಂದು ವೀಣಾ ಜಾರ್ಜ್ ಸ್ಪಷ್ಟಪಡಿಸಿದ್ದಾರೆ.
ಆಸ್ಪತ್ರೆಗಳಲ್ಲಿ ಎಲ್ಲ ಅಗತ್ಯ ಸೌಲಭ್ಯಗಳಿವೆ. ಅಗತ್ಯಕ್ಕೆ ತಕ್ಕಂತೆ ಸಾಕಷ್ಟು ಹಾಸಿಗೆಗಳು, ಸಾಮಾನ್ಯ ಬೆಡ್, ಐಸಿಯು ಬೆಡ್ ವೆಂಟಿಲೇಟರ್ ಮತ್ತು ಆಕ್ಸಿಜನ್ ಬೆಡ್ ಒದಗಿಸಲಾಗಿದೆ. ಇದನ್ನೆಲ್ಲ ಹೆಚ್ಚಿಸುವ ನಿರ್ಧಾರ ಈ ಹಿಂದೆಯೇ ಕೈಗೊಳ್ಳಲಾಗಿತ್ತು.
ಆಸ್ಪತ್ರೆಗಳಲ್ಲಿ ಹೆಚ್ಚಿನ ಆರೋಗ್ಯ ಕಾರ್ಯಕರ್ತರನ್ನು ನೇಮಿಸಲು ಕ್ರಮಕೈಗೊಳ್ಳಲಾಗಿದೆ. ಕೋವಿಡ್ ಅಥವಾ ಇತರ ಯಾವ ರೋಗಗಳಾದರೂ ಚಿಕಿತ್ಸೆ ನಿರಾಕರಿಸಲಾಗಿಲ್ಲ. 24 ಆಸ್ಪತ್ರೆಗಳಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಸೌಲಭ್ಯಗಳನ್ನು ಒದಗಿಸಲಾಗಿದೆ. ಎರಡನೇ ತರಂಗದಿಂದ ಮೂರನೇ ತರಂಗದವರೆಗೆ 1588 ಹೆಚ್ಚುವರಿ ಹಾಸಿಗೆಗಳನ್ನು ಸಿದ್ಧಪಡಿಸಲಾಗಿದೆ ಎಂದು ಸಚಿವರು ಹೇಳಿದರು.
ಆರೋಗ್ಯ ಕಾರ್ಯಕರ್ತರಲ್ಲಿ ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೋಗ ಹರಡದಂತೆ ಕ್ರಮ ಕೈಗೊಳ್ಳುವಂತೆ ಆಸ್ಪತ್ರೆಗಳಿಗೆ ಸೂಚನೆ ನೀಡಿದರು. ಆಸ್ಪತ್ರೆಯ ನೌಕರರು ಸುರಕ್ಷಿತರಾಗಿ ಕರ್ತವ್ಯ ನಿರ್ವಹಿಸುವ ಬಗ್ಗೆ ಮೇಲಧಿಕಾರಿಗಳು ಖಾತ್ರಿ ನೀಡಬೇಕು. ಒಬ್ಬ ರೋಗಿಯೊಂದಿಗೆ ಒಬ್ಬ ಜೊತೆಗಾರ ಇರಬಹುದಾಗಿದೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ.