ಕೊಚ್ಚಿ: ಕೇರಳ ಹೈಕೋರ್ಟ್ ನಲ್ಲಿ ಮತ್ತೆ ಮಧ್ಯರಾತ್ರಿ ವಿಚಾರಣೆ ನಡೆದು ದಾಖಲೆ ನಿರ್ಮಾಣವಾಗಿದೆ. ಮಲಯಾಳಿ ವೈದ್ಯರೊಬ್ಬರಿಗೆ ಭುವನೇಶ್ವರ ಏಮ್ಸ್‍ನಲ್ಲಿ ಎಂಡಿ ಫೆÇರೆನ್ಸಿಕ್ಸ್‍ಗೆ ಪ್ರವೇಶ ನಿರಾಕರಿಸಿದ ಘಟನೆಯಲ್ಲಿ ಸಿಟ್ಟಿಂಗ್ ನಡೆದಿದೆ. ನ್ಯಾಯಮೂರ್ತಿ ರಾಜಾ ವಿಜಯರಾಘವನ್ ಅವರು ಅರ್ಜಿಯನ್ನು ಪರಿಗಣಿಸಿದ್ದಾರೆ.
ಅರ್ಜಿದಾರರು ವಯನಾಡ್ ಮೂಲದ ಶರತ್ ದೇವಸ್ಯ. ಅವರು ಸಾಕಷ್ಟು ಪ್ರಮಾಣಪತ್ರಗಳನ್ನು ನೀಡದ ಕಾರಣಕ್ಕೆ ಪ್ರವೇಶ ನಿರಾಕರಿಸಲಾಗಿದೆ. ಅರ್ಜಿಯನ್ನು ಆನ್‍ಲೈನ್‍ನಲ್ಲಿ ಪರಿಗಣಿಸಲಾಗುತ್ತಿದೆ.
ಇದಕ್ಕೂ ಮುನ್ನ ಹೈಕೋರ್ಟ್ ಮಧ್ಯರಾತ್ರಿ ತುರ್ತು ಕಲಾಪ ನಡೆಸಿ ಅರ್ಜಿಯನ್ನು ಪರಿಗಣಿಸಿತ್ತು. ಕೊಚ್ಚಿಯಲ್ಲಿ ಲಂಗರು ಹಾಕಿದ್ದ ಸರಕು ಸಾಗಣೆ ಹಡಗನ್ನು ಮಧ್ಯರಾತ್ರಿ ಬಂದರಿನಿಂದ ಹೊರಹೋಗದಂತೆ ಹೈಕೋರ್ಟ್ ನಿರ್ಬಂಧಿಸಿತ್ತು. ಹಡಗಿಗೆ ಸರಬರಾಜಾಗುವ ನೀರಿಗೆ 2.5 ಕೋಟಿ ರೂಪಾಯಿ ಪಾವತಿಸಬೇಕು ಎಂದು ಕೊಚ್ಚಿ ಮೂಲದ ಕಂಪನಿ ಸಲ್ಲಿಸಿದ್ದ ಅರ್ಜಿಯಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಿತ್ತು.