ತಿರುವನಂತಪುರ: ಕೊರೊನಾ ಗಂಭೀರ ರೋಗಿಗಳಿಗೆ ಚಿಕಿತ್ಸೆ ನಿರಾಕರಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಇದು ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೂ ಅನ್ವಯಿಸುತ್ತದೆ. ಕೊರೊನಾ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿಗಳು ಈ ಘೋಷಣೆ ಮಾಡಿದ್ದಾರೆ.
ರಾಜ್ಯದಲ್ಲಿ ಕೊರೊನಾ ಹರಡುವಿಕೆಯಲ್ಲಿ ಕೊಂಚ ಇಳಿಕೆಯಾಗಿದೆ ಎಂದು ಸಿಎಂ ಹೇಳಿದರು. ತಿರುವನಂತಪುರ, ವಯನಾಡು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಸಾಂಕ್ರಾಮಿಕ ರೋಗಗಳು ಉಲ್ಬಣಗೊಳ್ಳುತ್ತಿವೆ. ಆಸ್ಪತ್ರೆಗಳು ಮತ್ತು ಐಸಿಯುಗಳಿಗೆ ದಾಖಲಾದವರ ಸಂಖ್ಯೆಯನ್ನು ಪರಿಗಣಿಸಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.
ಲಸಿಕೆ ಹಾಕುವುದನ್ನು ತ್ವರಿತಗೊಳಿಸುವಂತೆ ಆರೋಗ್ಯ ಇಲಾಖೆಗೆ ಸಿಎಂ ಸೂಚಿಸಿದರು. ರಾಜ್ಯದಲ್ಲಿ ಎರಡನೇ ಡೋಸ್ ಲಸಿಕೆ ಶೇ.84 ಪೂರ್ಣಗೊಂಡಿದ್ದು, ಮಕ್ಕಳ ಲಸಿಕೆ ಶೇ.71 ಪೂರ್ಣಗೊಂಡಿದೆ. ಕೊರೋನಾ ಸಾವಿನ ಸಹಾಯಧನಕ್ಕ್ಕಾಗಿ ಸ್ವೀಕರಿಸಿದ 45,000 ಅರ್ಜಿಗಳಲ್ಲಿ 40,410 ಸರ್ಕಾರದಿಂದ ಧನಸಹಾಯ ಪಡೆದಿರುವರೆಂದು ಮುಖ್ಯಮಂತ್ರಿ ತಿಳಿಸಿದರು.