ನವದೆಹಲಿ: ತೃತೀಯಲಿಂಗಿಗಳ ಹಕ್ಕುಗಳನ್ನು ಗುರುತಿಸಿರುವ ಕೇಂದ್ರ ಸರ್ಕಾರ, ಯಾವುದೇ ರೀತಿಯ ಶೋಷಣೆಯಿಂದ ಅವರನ್ನು ರಕ್ಷಿಸಲು ತೃತೀಯಲಿಂಗಿ ಕೈದಿಗಳಿಗೆ ಜೈಲುಗಳಲ್ಲಿ ಪ್ರತ್ಯೇಕ ವಾರ್ಡ್ ಗಳನ್ನು ನಿರ್ಮಿಸುವಂತೆ ಸೋಮವಾರ ರಾಜ್ಯಗಳಿಗೆ ಸೂಚಿಸಿದೆ.
ತೃತೀಯಲಿಂಗಿ ಕೈದಿಗಳನ್ನು ಅವರ ಆದ್ಯತೆಯ ಲಿಂಗದ ವ್ಯಕ್ತಿ ಅಥವಾ ತರಬೇತಿ ಪಡೆದ ವೈದ್ಯರಿಂದ ಖಚಿತಪಡಿಸಿಕೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವಾಲಯ ರಾಜ್ಯಗಳಿಗೆ ಸೂಚಿಸಿದೆ.
ಈ ಸಂಬಂಧ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು, ಕೇಂದ್ರಾಡಳಿತ ಪ್ರದೇಶಗಳ ಆಡಳಿತಾಧಿಕಾರಿಗಳು ಮತ್ತು ಡಿಜಿಪಿಗಳಿಗೆ ಪತ್ರ ಬರೆದಿರುವ ಕೇಂದ್ರ, ಜೈಲುಗಳಲ್ಲಿ ಟ್ರಾನ್ಸ್-ಮೆನ್ ಮತ್ತು ಟ್ರಾನ್ಸ್-ವುಮೆನ್ ಕೈದಿಗಳಿಗೆ ಪ್ರತ್ಯೇಕ ವಾರ್ಡ್‌ಗಳನ್ನು ರಚಿಸಲು ಸೂಚಿಸಿದೆ.
ಟ್ರಾನ್ಸ್-ಮಹಿಳಾ ಕೈದಿಗಳಿಗೆ ಪ್ರತ್ಯೇಕ ಶೌಚಾಲಯಗಳು ಮತ್ತು ಶವರ್ ಸೌಲಭ್ಯಗಳಿಗೆ ಸಂಬಂಧಿಸಿದಂತೆ ತೃತೀಯಲಿಂಗಿಗಳ ಗೌಪ್ಯತೆ ಮತ್ತು ಘನತೆಯ ಹಕ್ಕುಗಳ ಸಾಕಷ್ಟು ಸಂರಕ್ಷಣೆ ಇರಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.