ಕುಂಬಳೆ: ಕ್ಷಯ ರೋಗಿಗಳಿಗೆ ಕುಂಬಳೆ ಗ್ರಾಮ ಪಂಚಾಯತಿಯ ಪೌಷ್ಟಿಕಾಂಶ ಕಿಟ್ ವಿತರಣೆ ಆರಂಭಗೊಂಡಿದೆ.
ಪಂಚಾಯಿತಿ ವತಿಯಿಂದ ಕ್ಷಯರೋಗ ಔಷಧ ಸೇವಿಸುವ 23 ರೋಗಿಗಳಿಗೆ ಪೌಷ್ಟಿಕಾಂಶ ನೀಡಲಾಗುತ್ತಿದೆ. ರೋಗಿಯ ಆರೋಗ್ಯ ಕಾಪಾಡುವ ಗುರಿಯೊಂದಿಗೆ ಈ ಯೋಜನೆ ಜಾರಿಗೊಳಿಸಲಾಗಿದೆ. ಆರಿಕ್ಕಾಡಿ ಪಿಎಚ್‍ಸಿ ವತಿಯಿಂದ ಗ್ರಾ.ಪಂ ಯ ವಾರ್ಷಿಕ `1ಲಕ್ಷ ಯೋಜನೆಯಡಿ ಈ ಪೌಷ್ಠಿಕಾಂಶ ವಿತರಣೆಗೆ ಅನುವುಮಾಡಲಾಗಿದೆ.
ಗ್ರಾಮ ಪಂಚಾಯತಿ ಅಧ್ಯಕ್ಷೆ ತಾಹಿರಾ ಯೂಸುಫ್, ವೈದ್ಯಾಧಿಕಾರಿ ಡಾ.ಸ್ಮಿತಾ ಪ್ರಭಾಕರನ್ ಪಿಳ್ಳೈ ಅವರಿಗೆ ಆಹಾರ ಕಿಟ್ ವಿತರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಉಪಾಧ್ಯಕ್ಷ ನಾಸರ್ ಮೊಗ್ರಾಲ್ ಅಧ್ಯಕ್ಷತೆ ವಹಿಸಿದ್ದರು.
ಗ್ರಾಮ ಪಂಚಾಯಿತಿ ಸದಸ್ಯ ಅನ್ವರ್ ಹುಸೇನ್, ಆರೋಗ್ಯ ಮೇಲ್ವಿಚಾರಕ ಬಿ.ಅಶ್ರಫ್, ಆರೋಗ್ಯ ನಿರೀಕ್ಷಕಿ ಗನ್ನಿಮೋಳ್, ಪಿ.ಎಚ್.ಎನ್.ಸುಜಾತಾ ಮಾತನಾಡಿದರು.