ತಿರುವನಂತಪುರ: ರಾಜ್ಯದಲ್ಲಿ ಓಮಿಕ್ರಾನ್ ಪೀಡಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ೧೮೧ಕ್ಕೆ ಹೆಚ್ಚಳಗೊಂಡು ಆತಂಕ ಮೂಡಿಸಿದೆ.
ತಿರುವನಂತಪುರ೧೦, ಆಲಪ್ಪುಳ-೭, ತ್ರಿಶೂರ್-೬ ಮತ್ತು ಮಲಪ್ಪುರಂ-೬ ಎಂಬಂತೆ ಇಂದು ಓಮಿಕ್ರಾನ್ ಪತ್ತೆಯಾಗಿದೆ. ಇದರಲ್ಲಿ ೨೫ ಮಂದಿ ಕಡಿಮೆ ಅಪಾಯದ ದೇಶಗಳಿಂದ ಮತ್ತು ೨ ಮಂದಿ ಹೆಚ್ಚಿನ ಅಪಾಯದ ದೇಶಗಳಿಂದ ಬಂದವರು, ಆಲಪ್ಪುಳದಲ್ಲಿ ಇಬ್ಬರು ಸಂಪರ್ಕದಿಂದ ರೋಗಕ್ಕೆ ತುತ್ತಾಗಿದ್ದಾರೆ.
ತಿರುವನಂತಪುರದಲ್ಲಿ ಒಂಬತ್ತು ದೃಢಪಡಿಸಿದ ಪ್ರಕರಣಗಳು ಯುಎಇಯಿಂದ ಮತ್ತು ಒಂದು ಕತಾರ್‌ನಿಂದ ಬಂದವರು. ಅಲಪ್ಪುಳದಲ್ಲಿ ರೋಗನಿರ್ಣಯ ಮಾಡಿದವರಲ್ಲಿ, ೩ ಯುಎಇ, ೨ ಯುಕೆ, ೩ ಕೆನಡಾ, ೨ ಯುಎಇ, ೧ ಪೂರ್ವ ಆಫ್ರಿಕಾದಿಂದ ಮತ್ತು ಮಲಪ್ಪುರಂನಲ್ಲಿ ಆರು ಮಂದಿ ಸೋಮಕು ಪತ್ತೆಯಾದವರೆಲ್ಲರೂ ಯುಎಇಯಿಂದ ಆಗಮಿಸಿದವರು.
ಇಲ್ಲಿಯವರೆಗೆ, ಒಮಿಕ್ರಾನ್‌ಗೆ ಚಿಕಿತ್ಸೆ ಪಡೆಯುತ್ತಿದ್ದ ೪೨ ಜನರು ಗುಣಮುಖರಾಗಿದ್ದಾರೆ. ಎರ್ನಾಕುಳಂ ೧೬, ತಿರುವನಂತಪುರ ೧೫, ತ್ರಿಶೂರ್ ೪, ಆಲಪ್ಪುಳ ೩, ಪತ್ತನಂತಿಟ್ಟ, ಕೊಟ್ಟಾಯಂ, ಮಲಪ್ಪುರಂ ಮತ್ತು ಕಣ್ಣೂರು ತಲಾ ಒಬ್ಬರಂತೆ ಗುಣಮುಖರಾಗಿ ಆಸ್ಪತ್ರೆಯಿಂದ ತೆರಳಿದ್ದಾರೆ.