ತಿರುವನಂತಪುರ: ಕಾಗುಣಿತವಿಲ್ಲದೆ ಬರೆಯಲು ಬಾರದವರು ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಹೇಗೆ ಮುಂದುವರಿಯುತ್ತಾರೆ ಎಂಬ ರಾಜ್ಯಪಾಲರ ಪ್ರಶ್ನೆಗೆ ವಿ.ಸಿ. ಪ್ರತಿಕ್ರಿಯಿಸಿದ್ದಾರೆ. ಎರಡು ಸಾಲುಗಳನ್ನು ಸರಿಯಾಗಿ ಬರೆಯಲು ಬಾರದ ವ್ಯಕ್ತಿ ಕೇರಳ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಹೇಗೆ ಮುಂದುವರಿಯಬಹುದು ಎಂದು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಸೋಮವಾರÀ ಕೇಳಿದ್ದರು. ಇದಕ್ಕೆ ವಿ.ಸಿ. ಪ್ರೊ. ವಿ.ಪಿ.ಮಹದೇವನ್ ಪಿಳ್ಳೆ ಹೇಳಿಕೆಯಲ್ಲಿ ಉತ್ತರ ನೀಡಿದ್ದಾರೆ.
ಬದುಕಿನ ವ್ಯಾಕರಣ, ಕಾಗುಣಿತ ತಪ್ಪದಂತೆ ಆದಷ್ಟು ಎಚ್ಚರ ವಹಿಸಿದ್ದೇನೆ ಎಂದು ವಿಸಿ ಉತ್ತರಿಸಿರುವರು. ಕೈಕುಲುಕುವುದು ಸಹಜವಾದ ಸಮಸ್ಯೆಯಾಗಿ ಕಾಣುತ್ತಿಲ್ಲ ಎಂದರು. ಮಾನಸಿಕ ಆಘಾತಗಳಾದಾಗ ಬರೆಯುವ ಕೈಗಳು ಸೋಲುವುದು ಸಹಜವಾಗಿದ್ದು, ದೊಡ್ಡ ವಿಚಾರವೆಂದು ನನಗನಿಸುತ್ತಿಲ್ಲ. ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ವಿಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಗೌರವ ಡಾಕ್ಟರೇಟ್ ನೀಡುವ ಪ್ರಸ್ತಾಪವನ್ನು ತಿರಸ್ಕರಿಸಿ ಕೇರಳ ವಿಶ್ವವಿದ್ಯಾಲಯದ ಉಪಕುಲಪತಿಗಳು ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ವಿವಾದಾತ್ಮಕ ತಪ್ಪು ಕಾಗುಣಿತಗಳಿವೆ ಎಂದು ರಾಜ್ಯಪಾಲರು ವ್ಯೆಂಗ್ಯವಾಡಿದ್ದರು. ವಿಶ್ವವಿದ್ಯಾನಿಲಯದ ಚುಕ್ಕಾಣಿ ಹಿಡಿದ ವ್ಯಕ್ತಿಯಿಂದ ಮಾಡಿದ ತಪ್ಪುಗಳು ರಾಜ್ಯಪಾಲರಿಂದ ಬಹಿರಂಗಗೊಳ್ಳುತ್ತಿರುವಂತೆ ವಿವಿಧೆಡೆ ಚರ್ಚೆಗೊಳಗಾಗಿದ್ದವು.