ಕೊಚ್ಚಿ: ಕೇರಳದ ತಿರುವಲ್ಲ ಮೂಲದ 44 ವರ್ಷದ ಮಜು ವರ್ಗೀಸ್ ವಿಶ್ಚದ ಹಿರಿಯಣ್ಣ ಅಮೆರಿಕದ ಶ್ವೇತಭವನದ ತಮ್ಮ ಉನ್ನತ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ. ಅವರು ಶ್ವೇತಭವನದಲ್ಲಿ ಸೇನಾ ಕಚೇರಿಯ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಅಮೆರಿಕಾಧ್ಯಕ್ಷ ಜೋ ಬೈಡನ್ ಅವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಎಲ್ಲಾ ಪ್ರಮುಖರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದ ನೇತೃತ್ವವನ್ನು ಮಜು ಅವರು ವಹಿಸಿಕೊಂಡಿದ್ದರು ಎನ್ನುವುದು ಗಮನಾರ್ಹ.
ಕಳೆದ ಎರಡೂವರೆ ವರ್ಷದಿಂದ ಅವರು ಆ ಸ್ಥಾನವನ್ನು ಅಲಂಕರಿಸಿದ್ದರು. ಇದೀಗ ವೈಯಕ್ತಿಕ ಕಾರಣಗಳಿಂದ ತಾವು ರಾಜಿನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ಸೇನಾ ಕಚೇರಿ ನಿರ್ದೇಶಕ ಹುದ್ದೆ ತಮಗೆ ಸಂದ ಜೀವಮಾನದ ಗೌರವ ಎಂದು ಅವರು ಹೇಳಿದ್ದಾರೆ.