ಕಾಸರಗೋಡು: ನೆಹರೂ ಯುವಕೇಂದ್ರ ವತಿಯಿಂದ ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಬುಧವಾರ ಸ್ವಾಮಿ ವಿವೇಕಾನಂದ ಸಂಸ್ಮರಣೆಯೊಂದಿಗೆ ವಿವಿಧ ಕಾರ್ಯಕ್ರಮ ಜರುಗಿತು. ಸಹಾಯಕ ಜಿಲ್ಲಾಧಿಕಾರಿ ಸೂರ್ಯನಾರಾಯಣನ್ ಸಮಾರಂಭ ಉದ್ಘಾಟಿಸಿದರು. ನೆಹರೂ ಯುವಕೇಂದ್ರ ಯೂತ್ ಪ್ರೋಗ್ರಾಮ್ ಅಧಿಕಾರಿ ಪಿ.ಅಖಿಲ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಾರ್ತಾಧಿಕಾರಿ ಎಂ. ಮಧುಸೂಧನನ್, ಜಿಲ್ಲಾ ಸ್ಪೋಟ್ರ್ಸ್ ಅಧಿಕಾರಿ ಸುದೀಪ್ ಬೋಸ್ ಉಪಸ್ಥಿತರಿದ್ದರು. ರಾಷ್ಟ್ರೀಯ ತರಬೇತುದಾರ ಜೋಸ್ ಸಯ್ಯಿಲ್ ಸ್ವಾಮಿ ವಿವೇಕಾನಂದ ಅವರ ಜೀವನ ಮತ್ತು ಬೋಧನೆ ವಿಷಯದಲ್ಲಿ ತರಗತಿ ನಡೆಸಿದರು. ಯೂತ್ ವಾಲೆಂಟಿಯರ್ ಸನುಜಾ ಸ್ವಾಗತಿಸಿದರು. ಲತೀಶ್ ಎಂ ವಂದಿಸಿದರು.