ಕಾಸರಗೋಡು: ಆರ್‍ಟಿಪಿಸಿಆರ್ ತಪಾಸಣಾ ಫಲಿತಾಂಶ ಶೀಘ್ರ ಲಭ್ಯವಾಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕಾಸರಗೋಡು ಜನರಲ್ ಆಸ್ಪತ್ರೆ ಸೂಪರಿಂಟೆಂಡೆಂಟ್ ಡಾ. ರಾಜಾರಾಮ್ ಅವರನ್ನು ಯುವಮೋರ್ಚಾ ಕಾಸರಗೋಡು ಜಿಲ್ಲಾ ಸಮಿತಿ ಮನವಿ ಮೂಲಕ ಒತ್ತಾಯಿಸಿದೆ.
ರಾಜ್ಯದಲ್ಲಿ ಕೋವಿಡ್ ಪ್ರಕರಣ ಹೆಚ್ಚಳಕ್ಕೆ ರಾಝ್ಯ ಸರ್ಕಾರ ಹಾಗೂ ಆರೋಗ್ಯ ಇಲಾಖೆಯ ನಿರ್ಲಕ್ಷ್ಯ ಧೋರಣೆ ಕಾರಣವಾಗಿದೆ. ಕೋವಿಡ್ ನಿರ್ವಹಣೆಯಲ್ಲಿ ಆರೋಗ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ. ಪ್ರಸಕ್ತ ಆರ್‍ಟಿಪಿಸಿಆರ್ ಫಲಿತಾಂಶ ಲಭಿಸಲು 72ತಾಸುಗಳ ಕಾಲ ಕಾಯಬೇಕು.ಇದು ರೋಗ ಹರಡಲು ಪ್ರಮುಖ ಕಾರಣವಾಗುತ್ತಿದೆ. ರೋಗಲಕ್ಷಣವಿದ್ದರೂ, ಫಲಿತಾಂಶ ಲಭ್ಯವಾಗದಿದ್ದಲ್ಲಿ ಕ್ವಾರಂಟೈನ್ ತೆರಳದ ಪ್ರಕರಣ ಹೆಚ್ಚಾಗಿದ್ದು, ಆರ್‍ಟಿಪಿಸಿಆರ್ ತಪಾಸಣಾ ವರದಿ ಶೀಘ್ರ ಕೈಸೇರುವಂತೆ ಮಾಡಲು ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳುವಂತೆಯೂ ಮನವಿಯಲ್ಲಿ ತಿಳಿಸಲಾಗಿದೆ.
ಜಿಲ್ಲಾಸಮಿತಿ ಪದಾಧಿಕಾರಿಗಳಾದ ಧನಂಜಯ ಮಧೂರ್, ರಾಜ್ಯ ಮಹಿಳಾ ಸಂಚಾಲಕಿ ಅಂಜು ಜೋಸ್ಟಿ, ರಕ್ಷಿತ್ ಕೆದಿಲಾಯ, ಅಗ್ನೇಶ್ ಅವರು ಸೂಪರಿಂಟೆಂಡೆಂಟ್ ಭೇಟಿ ವಏಳೆ ಉಪಸ್ಥಿತರಿದ್ದರು.