ಉಪ್ಪಳ: ಇಪ್ಪತ್ತು ದಿನಗಳ ಹಿಂದೆ ಕಣ್ಣೂರು ಪಯಂಗಡಿ ಪೋಲೀಸ್ ಠಾಣಾ ವ್ಯಾಪ್ತಿಯಗೊಳಪಟ್ಟ ಹೊಳೆಯಲ್ಲಿ ಪತ್ತೆಯಾದ ಮೃತದೇಹದ ಗುರುತು ಇನ್ನೂ ಅಲಭ್ಯವಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಂಜೇಶ್ವರದ ಕರ್ನಾಟಕ ಗಡಿ ಪ್ರದೇಶದ ವ್ಯಕ್ತಿಯೆಂದು ಪೋಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಸುಮಾರು 40 ವರ್ಷ ಪ್ರಾಯದ ಗಂಡಸಿನ ಮೃತದೇಹ ಡಿ.26ರಂದು ಮಾಟೂರು ಹೊಳೆಯಲ್ಲಿ ಪತ್ತೆಯಾಗಿತ್ತು. ಮೃತದೇಹದಲ್ಲಿ ಅಂಗಿ,ಚಡ್ಡಿಹಾಗೂ ಕೈಯಲ್ಲಿ ಮಚ್ಚೆ ಲಗತ್ತಿಸಲಾಗಿತ್ತು. ಈ ಮೃತದೇಹದ ಗುರುತು ಪತ್ತೆಯಾದಲ್ಲಿ ಈ ಕೆಳಗಿನ ನಂಬ್ರಕ್ಕೆ ಕರೆ ಮಾಡಲು ಪೋಲೀಸರು ತಿಳಿಸಿದ್ದಾರೆ. ಮೊಬೈಲ್ ಸಂಖ್ಯೆ: 9497947258, 04972870233