ಉಪ್ಪಳ: ಕೆ.ಪಿ.ಎಸ್.ಟಿ.ಎ (ಕೇರಳ ಪ್ರದೇಶ್ ಸ್ಕೂಲ್ ಟೀಚರ್ಸ್ ಅಸೋಸಿಯೇಶನ್) ಮಂಜೇಶ್ವರ ಉಪಜಿಲ್ಲಾ ಸಮ್ಮೇಳನ ಜಿ.ಎಚ್.ಎಸ್ .ಎಸ್ ಮಂಗಲ್ಪಾಡಿ ಶಾಲೆಯಲ್ಲಿ ಜರಗಿತು. ಸಭೆಯ ಅಧ್ಯಕ್ಷತೆಯನ್ನು ಕೆ.ಪಿ.ಎಸ್.ಟಿ.ಎ ಉಪಜಿಲ್ಲಾ ಅಧ್ಯಕ್ಷ ವಿಮಲ್ ಅಡಿಯೋಡಿ ವಹಿಸಿದ್ದರು. ಸಮ್ಮೇಳನವನ್ನು ಕೆ.ಪಿ.ಎಸ್.ಟಿ.ಎ ಕಾಸರಗೋಡು ರೆವೆನ್ಯೂ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಕುಮಾರ್ ಪಿ.ಎಸ್ ಉದ್ಘಾಟಿಸಿದರು. ಕೆ.ಪಿ.ಎಸ್.ಟಿ.ಎ ಕಾಸರಗೋಡು ವಿದ್ಯಾಭ್ಯಾಸ ಜಿಲ್ಲಾ ಕಾರ್ಯದರ್ಶಿ ಗೋಪಾಲಕೃಷ್ಣನ್ ಮುಖ್ಯಅತಿಥಿಯಾಗಿ ಭಾಗವಹಿಸಿದರು. ಜಿಲ್ಲಾ ಜೊತೆ ಕಾರ್ಯದರ್ಶಿ ಜನಾರ್ಧನನ್ ಕೆ.ವಿ, ಜಿಲ್ಲಾ ಅಲ್ಪಸಂಖ್ಯಾತ ಕನ್ವೀನರ್ ರಾಧಾಕೃಷ್ಣ ಶುಭಾಶಂಸನೆಗೈದರು. ಬಳಿಕ 2022ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಕೆ.ಪಿ.ಎಸ್.ಟಿ.ಎ ಉಪಜಿಲ್ಲಾ ಅಧ್ಯಕ್ಷರಾಗಿ ಜಿ.ಡಬ್ಲೂ.ಎಲ್.ಪಿ ಶಾಲೆ ಮಂಜೇಶ್ವರದ ಜಬ್ಬಾರ್.ಬಿ, ಉಪಾಧ್ಯಕ್ಷರಾಗಿ ಜಿ.ಎಚ್.ಎಸ್ ಕಡಂಬಾರು ಶಾಲೆಯ ಮೂಸಾಕುಂಞÂ್ಞ .ಡಿ, ಎ.ಎಲ್.ಪಿ ಶಾಲೆ ಕುಡಾಲು ಮೇರ್ಕಳದ ಜಿಜೋ.ಎನ್, ಕಾರ್ಯದರ್ಶಿಯಾಗಿ ಜಿ.ಎಚ್.ಎಸ್ ಕಡಂಬಾರು ಶಾಲೆಯ ಇಸ್ಮಾಯಿಲ್.ಎಂ,ಜೊತೆ ಕಾರ್ಯದರ್ಶಿಗಳಾಗಿ ಕುಡಾಲುಮೇರ್ಕಳ ಶಾಲೆಯ ಮುಖ್ಯೋಪಾಧ್ಯಾಯ ಪ್ರಕಾಶನ್ ನಂಬೂದಿರಿ,ಹೊಸಬೆಟ್ಟು ಜಿ.ಎಲ್.ಪಿ ಶಾಲೆಯ ಸಂತೋಷ್ ಕುಮಾರ್, ಕೋಶಾಧಿಕಾರಿಯಾಗಿ ಜಿ.ಎಲ್.ಪಿ ಎಸ್ ಕುಳೂರು ಶಾಲೆಯ ಸೌಮ್ಯ.ಪಿ ಆಯ್ಕೆಯಾದರು. ರೆವೆನ್ಯೂ ಜಿಲ್ಲಾ ಸಮಿತಿಗೆ ವಿಮಲ್ ಅಡಿಯೋಡಿ, ಜನಾರ್ಧನನ್ ಕೆ.ವಿ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಬೂಬಕರ್.ಕೆ, ಶ್ರೀನಿವಾಸ ಕೆ.ಎಚ್, ಕಮಲಾಕ್ಷಿ, ಪ್ರಸೀತಕುಮಾರಿ, ಸುರೇಂದ್ರನ್ ಚೀಮೇನಿ, ರಾಧಾಕೃಷ್ಣ ಆರ್, ಝೀನಾ ಮರಿಯಂ ಆಯ್ಕೆಯಾದರು. ಇಸ್ಮಾಯಿಲ್ ಮಾಸ್ತರ್ ವರದಿ ಹಾಗೂ ಲೆಕ್ಕಪತ್ರವನ್ನು ಜಬ್ಬಾರ್ ಬಿ ಮಂಡಿಸಿದರು. ಇಸ್ಮಾಯಿಲ್ ಮಾಸ್ತರ್ ಸ್ವಾಗತಿಸಿ, ಜಬ್ಬಾರ್ ಬಿ ವಂದಿಸಿದರು.