ತಿರುವನಂತಪುರ: ಪತ್ನಿಯರನ್ನು ಹಂಚಿಕೊಂಡ ಭಾರೀ ದೊಡ್ಡ ವಂಚನಾ ಪ್ರಕರಣದ ಬಗ್ಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪಿ.ಸತಿದೇವಿ ಅವರು ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಹೇಳಿರುವರು. ಪಿ.ಸತಿದೇವಿ ಮಾತನಾಡಿ, ಇದು ಕೇರಳದಲ್ಲಿ ಮಾತ್ರವಲ್ಲದೇ ದೇಶದಲ್ಲೇ ಕಂಡು ಕೇಳರಿಯದ ಘಟನೆಯಾಗಿದ್ದು, ಇದು ಗಂಭೀರ ವಿಚಾರವಾಗಿದೆ ಎಂದಿರುವರು.
ಸುಸಂಸ್ಕೃತ ಸಮಾಜಕ್ಕೆ ಯೋಚಿಸಲಾಗದಂತಹ ಸಂಗತಿಗಳು ನಡೆಯುತ್ತಿವೆ. ಚಿತ್ರನಟಿ ಮೇಲಿನ ಹಲ್ಲೆ ಪ್ರಕರಣದಲ್ಲಿ ಹೊಸ ಅಂಶ ಬಹಿರಂಗವಾಗಿರುವ ಹಿನ್ನೆಲೆಯಲ್ಲಿ ವಿಸ್ತೃತ ತನಿಖೆ ನಡೆಸಿ, ಸಾಕ್ಷಿದಾರರ ತಿರುಚುವಿಕೆ ಸೇರಿದಂತೆ ವಿಷಯಗಳ ಬಗ್ಗೆ ತನಿಖೆ ನಡೆಸಬೇಕು ಎಂದಿರುವರು.