ಪೆರ್ಲ: ಎಣ್ಮಕಜೆ ಗ್ರಾ.ಪಂ.ಹೊಸ ಆಡಳಿತ ಸಮಿತಿಯ ಒಂದು ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಗುರುವಾರ ವಿವಿಧ ಕಾರ್ಯಕ್ರಮಗಳು ನಡೆದವು.
ಈ ಸಂದರ್ಭದಲ್ಲಿ ಪೆರ್ಲ ಪೇಟೆಯಲ್ಲಿನ "ಟೇಕ್ ಎ ಬ್ರೇಕ್" ಶೌಚಾಲಯ ಕಟ್ಟಡ ಮತ್ತು ಪಂಚಾಯಿತಿ ಜನ ಸಹಾಯ ಕೇಂದ್ರ,
ಗ್ರಾ.ಪಂ. ವ್ಯಾಪ್ತಿಯಲ್ಲಿ ಕೆಲಸ ಪೂರ್ತಿಗೊಂಡ 10 ರಸ್ತೆಗಳನ್ನು ನಾಡಿಗೆ ಸಮರ್ಪಿಸಲಾಯಿತು.
ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಕಾರ್ಯಕ್ರಮ ಉದ್ಘಾಟಿಸಿದರು. ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಉಪಾಧ್ಯಕ್ಷೆ ಡಾ.ಫಾತಿಮತ್ ಝಹನಾಸ್ ಹಂಸಾರ್ ,ಜಿಲ್ಲಾ ಪಂಚಾಯಿತಿ ಸದಸ್ಯ ನಾರಾಯಣ ನಾಯ್ಕ, ಬ್ಲಾಕ್ ಪಂ.ಸದಸ್ಯ ಬಟ್ಟು ಶೆಟ್ಟಿ, ಅನಿಲ್ ಕುಮಾರ್ ಕೆ.ಪಿ, ಗ್ರಾ.ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್. ಗಾಂಭೀರ್, ಅರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಎ.ಕುಲಾಲ್, ಕ್ಷೇಮಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸೌಧಾಬಿ ಹನೀಫ್, ಹಸಿರು ಕೇರಳ ಮಿಷನ್ ಜಿಲ್ಲಾ ಕೊರ್ಡಿನೇಟರ್ ಎಂ.ಪಿ. ಸುಬ್ರಹ್ಮಣ್ಯನ್, ಶುಚಿತ್ವ ಮಿಷನ್ ಜಿಲ್ಲಾ ಕೋರ್ಡಿನೇಟರ್ ಲಕ್ಷ್ಮಿ, ಹಸಿರು ಕ್ರಿಯಾ ಸೇನೆ ಬ್ಲಾಕ್ ರಿಸೋರ್ಸ್ ಪರ್ಸನ್ ಇಬ್ರಾಹಿಂ ಮಾಸ್ತರ್, ವಾರ್ಡ್ ಸದಸ್ಯರಾದ ಮಹೇಶ್ ಭಟ್, ಶಶಿಧರ, ಇಂದಿರಾ, ರಾಮಚಂದ್ರ, ನರಸಿಂಹ ಪೂಜಾರಿ, ರೂಪವಾಣಿ ಆರ್.ಭಟ್, ರಮ್ಲಾ ಇಬ್ರಾಹಿಂ, ಕುಸುಮಾವತಿ, ಸರೀನಾ ಮುಸ್ತಫಾ, ಉಷಾ ಕುಮಾರಿ, ಆಶಾಲತಾ ಮೊದಲಾದವರು ಭಾಗವಹಿಸಿದ್ದರು. ಎಣ್ಮಕಜೆ ಪಂಚಾಯಿತಿ ಸಹಾಯಕ ಅಭಿಯಂತರ ಶ್ರೀಜಿತ್ ವರದಿ ಮಂಡಿಸಿದರು.ಈ ಸಂದರ್ಭದಲ್ಲಿ
ಹಸಿರು ಕ್ರಿಯಾ ಸೇನೆಯ ಸದಸ್ಯರುಗಳಿಗೆ ವಿಜಿಎಫ್ ನಿಧಿ ವಿತರಣೆ, ಪೆರ್ಲ ಪೇಟೆ ಶುಚೀಕರಣ, ಕೋವಿಡ್ ಕಾಲ ಪ್ರತಿರೋಧ ಚಟುವಟಿಕೆಗಳಿಗೆ ನೇತೃತ್ವ ವಹಿಸಿದ ಆರೋಗ್ಯ ಕಾರ್ಯಕರ್ತರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಆರೋಗ್ಯ, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಗ್ರಾ.ಪಂ.ಕಾರ್ಯದರ್ಶಿ ಅಚ್ಚುತ ಮಣಿಯಾಣಿ ಸ್ವಾಗತಿಸಿ.ಹೆಡ್ ಕ್ಲರ್ಕ್ ಪಿ.ಎಸ್. ಪ್ರೇಮ ಚಂದ್ ವಂದಿಸಿದರು. ನರೇಗಾ ಸಹಾಯಕ ಅಭಿಯಂತರ ನವಾಸ್ ಮತ್ರ್ಯ ನಿರೂಪಿಸಿದರು.