ಪಾಲಕ್ಕಾಡ್: ಆರ್‌ಎಸ್‌ಎಸ್ ಕಾರ್ಯಕರ್ತ ಸಂಜಿತ್ ಹತ್ಯೆ ಪ್ರಕರಣದ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಸಂಜಿತ್ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದ ಮೇಲೆ ಕೊಜಿಂಜಂಪಾರ ಅತ್ತಿಕೋಡ್ ನಿವಾಸಿ ಮೊಹಮ್ಮದ್ ಹರೂನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಹತ್ಯೆಯ ನಂತರ ಸಂಚು ರೂಪಿಸಿದವರಿಗೆ ಹಾಗೂ ಕೊಲೆಗೆ ಸಹಕರಿಸಿದವರಿಗೆ ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದ ಪೊಲೀಸರು ಪ್ರಕರಣದಲ್ಲಿ 10 ಮಂದಿಯನ್ನು ಬಂಧಿಸಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾಗಿದ್ದ ಓರ್ವ ಸೇರಿದಂತೆ ಇನ್ನೂ ಮೂವರನ್ನು ಬಂಧಿಸಬೇಕಿದೆ.
ಪ್ರಕರಣದ ಮತ್ತೋರ್ವ ಪ್ರಮುಖ ವ್ಯಕ್ತಿ ಹಕೀಮ್‌ಗೆ ವಿವಾದದ ನಡುವೆಯೇ ನ್ಯಾಯಾಲಯವು ಈ ಹಿಂದೆ ಜಾಮೀನು ನೀಡಿತ್ತು.
ಹತ್ಯೆಯ ಸಂಚಿನಲ್ಲಿ ಹಕೀಮ್‌ಗೆ ಜಾಮೀನು ನೀಡಿರುವುದು ಪೊಲೀಸರು ಮತ್ತು ಪ್ರಾಸಿಕ್ಯೂಷನ್‌ನ ಕಡೆಯಿಂದ ಗಂಭೀರ ಲೋಪವಾಗಿದೆ ಎಂದು ಬಿಜೆಪಿ ಆರೋಪಿಸಿದೆ.ಪೊಲೀಸ್ ಮತ್ತು ಪಾಪ್ಯುಲರ್ ಫ್ರಂಟ್ ಮಧ್ಯೆ ಪರಸ್ಪರ ತಿಳುವಳಿಕೆ ಇದೆ ಎಂದು ಬಿಜೆಪಿ ಆರೋಪಿಸಿದೆ.
ಎಲಪ್ಪುಳ್ಳಿಯ ಎಡುಪುಕುಲಂ ನಿವಾಸಿ ಸಂಜಿತ್ ನವೆಂಬರ್ 15 ರಂದು ತನ್ನ ಪತ್ನಿಯೊಂದಿಗೆ ಬೈಕ್ ಸಂಚರಿಸುತ್ತಿದ್ದಾಗ ಪಾಪ್ಯುಲರ್ ಫ್ರೆಂಟ್ ನಿಂದ ಹತ್ಯೆಗೀಡಾಗಿದ್ದರು.