ಪಾಲಕ್ಕಾಡ್: ಕೋವಿಡ್ ವಿರುದ್ಧದ ಲಸಿಕೆ ಕೊರತೆ ಪರಿಹಾರಕ್ಕೆ ಆಗ್ರಹಿಸಿ ಬೆಕ್ಕಿನೊಂದಿಗೆ ಪ್ರತಿಭಟನೆ ನಡೆಸಲು ಬಂದ ವ್ಯಕ್ತಿಗೆ ಅದೇ ಬೆಕ್ಕು ಕಚ್ಚಿದ ಘಟನೆ ನಡೆದಿದೆ. ಪಾಲಕ್ಕಾಡ್ ಜಿಲ್ಲಾ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಯುವ ಕಾಂಗ್ರೆಸ್ ಕಾರ್ಯಕರ್ತರು ರಟ್ಟಿನ ಪೆಟ್ಟಿಗೆಯಲ್ಲಿ ಬೆಕ್ಕಿನೊಂದಿಗೆ ಆಗಮಿಸಿ ಆಸ್ಪತ್ರೆ ಅಧೀಕ್ಷಕರಿಗೆ ಮುತ್ತಿಗೆ ಹಾಕಿದರು.
ಆದರೆ ಬೆಕ್ಕು ಪೆಟ್ಟಿಗೆಯಿಂದ ತಪ್ಪಿಸಿಕೊಂಡಿತು. ಬೆಕ್ಕು ಹಿಡಿಯುವ ಯತ್ನದಲ್ಲಿ ಮಂಡಲಾಧ್ಯಕ್ಷ ಕೆ. ಸದ್ದಾಂ ಹುಸೇನ್ ಅವರ ಕೈಯನ್ನು ಕಚ್ಚಿದೆ. ಬಳಿಕ ದಡಾರ ವಿರುದ್ಧ ಲಸಿಕೆ ಹಾಕಿದ ನಂತರ ನಾಯಕ ಆಸ್ಪತ್ರೆಯಿಂದ ಮರಳಿದರು.