ಬದಿಯಡ್ಕ: ಕಾಸರಗೋಡು ಜಿಲ್ಲಾ ತ್ರೋಬಾಲ್ ಅಸೋಸಿಯೇಷನ್ ವತಿಯಿಂದ ಜರುಗಿದ ಸಬ್ ಜ್ಯೂನಿಯರ್ ಪಂದ್ಯಾಟದಲ್ಲಿ ಎಸ್‍ಎಪಿಎಚ್‍ಎಸ್‍ಎಸ್ ಅಗಲ್ಪಾಡಿ ಬಾಲಕರ ವಿಭಾಗದಲ್ಲೂ, ವಿವೇಕಾನಂದ ಬಾಯಾರು ತಂಡ ಬಾಲಕಿಯರ ವಿಭಾಗದಲ್ಲೂ ಚಾಂಪಿಯನ್ ಶಿಪ್ ಪಡೆದುಕೊಂಡಿದೆ.
ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರುಗಿದ ಪಂದ್ಯಾಟವನ್ನು ಕುಂಬ್ಡಾಜೆ ಗ್ರಾಮ ಪಂಚಾಯಿತಿ ಸದಸ್ಯ ಹರೀಶ್ ಗೋಸಾಡ ಉದ್ಘಾಟಿಸಿದರು. ಅಸೋಸಿಯೇಷನ್ ಅಧ್ಯಕ್ಷ ಸೂರ್ಯ ಭಟ್ ಎಡನೀರು ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯ ಗಿರೀಶ್, ರಾಜ್ಯ ಉಪಾಧ್ಯಕ್ಷ ಶಶಿಕಾಂತ್ ಜಿ. ಆರ್
ಶಿವಶಂಕರ್ ಭಟ್, ಕೆ ಎಂ ಬಲ್ಲಾಳ್, ಸಂತೋಷ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.