ಬದಿಯಡ್ಕ: ನೀರ್ಚಾಲು ಸಮೀಪದ ಕುಕ್ಕಂಕೂಡ್ಲು ಶ್ರೀಕಂಠಪ್ಪಾಡಿ ಶ್ರೀಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ವಿವಿಧ ಧಾರ್ಮಿಕ, ವೈದಿಕ ಕಾರ್ಯಕ್ರಮಗಳೊಂದಿಗೆ ಜ.22 ರಿಂದ ಮೊದಲ್ಗೊಂಡು ನಡೆಯುತ್ತಿದ್ದು, ಗುರುವಾರ ಬೆಳಿಗ್ಗೆ 6 ರಿಂದ 108 ಕಾಯಿಗಳ ಗಣಪತಿ ಹೋಮ ನಡೆಯಿತು. ಬಳಿಕ ಪ್ರತಿಷ್ಠಾ ಪಾನಿ, ಪ್ರತಿಷ್ಠಾ ಬಲಿ, ಅಂಕುಪೂಜೆ ನಡೆದು, 10.8ರ ಮುಹೂರ್ತದಲ್ಲಿ ಶ್ರೀಸುಬ್ರಹ್ಮಣ್ಯ ಸ್ವಾಮಿ, ಪರಿವಾರ ದೇವರ ಪ್ರತಿಷ್ಠೆ, ಕುಂಭೇಶ ಕಲಶಾಭಿಷೇಕ, ನಿದ್ರಾ ಕಲಶಾಭಿಷೇಕ ನಡೆಯಿತು. ಮಧ್ಯಾಹ್ನ 1.30 ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಿತು. ಸಂಜೆ 6 ಕ್ಕೆ ಮಾನ್ಯ ಅಯ್ಯಪ್ಪ ಸೇವಾ ಸಂಘದಿಂದ ಭಜನೆ ನಡೆಯಿತು. ಬಳಿಕ ನಿತ್ಯನೈಮಿತ್ತಿಕ ನಿರ್ಣಯ, ಭದ್ರದೀಪವಿಟ್ಟು ಕವಾಟ ಬಂಧನ, ಅಂಕುಪೂಜೆ, ಸೋಪಾನ ಪೂಜೆ ನಡೆಯಿತು. ರಾತ್ರಿ ವಿದುಷಿ ಯೋಗೀಶ್ವರಿ ಜಯಪ್ರಕಾಶ್ ಪುತ್ತೂರು ಇವರ ವೈಷ್ಣವಿ ನಾಟ್ಯಾಲಯದ ಬದಿಯಡ್ಕ ಶಾಖೆಯ ವಿದ್ಯಾರ್ಥಿಗಳಿಂದ `ನೃತ್ಯಾರ್ಪಣಂ' ಭರತನಾಟ್ಯ ಪ್ರದರ್ಶನ ನಡೆಯಿತು. ರಾತ್ರಿ 8 ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಿತು.
ಇಂದಿನ ಕಾರ್ಯಕ್ರಮ: ಜ.28 ರಂದು ಬೆಳಿಗ್ಗೆ 6 ರಿಂದ ಗಣಪತಿಹೋಮ, ಇಂದ್ರಾದಿ ದಿಕ್ಪಾಲಕ ಪ್ರತಿಷ್ಠೆ, ಸಪ್ರಮಾತೃಕಾ ಪ್ರತಿಷ್ಠೆ, ನಿರ್ಮಾಲ್ಯಧಾರಿ ಪ್ರತಿಷ್ಠೆ, ಅಂಕುರಪೂಜೆ ನಡೆಯಲಿದೆ. 10.30 ವಿದುಷಿಃ ಉಷಾ ಈಶ್ವರ ಭಟ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಸೋಪಾನ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಭೋಜನ ನಡೆಯಲಿದೆ. ಸಂಜೆ 6 ರಿಂದ ಯಕ್ಷವಿಹಾರಿ ಬದಿಯಡ್ಕ ತಂಡದಿಂದ ಯಕ್ಷಗಾನ ತಾಳಮದ್ದಳೆ, 7 ರಿಂದ ಅಂಕುರಪೂಜೆ, ಸೋಪಾನ ಪೂಜೆ, ರಾತ್ರಿ 8 ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಭೋಜನ ನಡೆಯಲಿದೆ.