ತಿರುವನಂತಪುರ: ಕೆ.ಎಸ್.ಆರ್.ಟಿ.ಸಿ. ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರ ಸ್ಫೋಟಗೊಂಡು ಕಂಡಕ್ಟರ್ ಕೈಗೆ ಗಾಯವಾದ ಘಟನೆ ನಡೆದಿದೆ. ತಿರುವನಂತಪುರಂ-ಬತ್ತೇರಿ ಸೂಪರ್ ಡಿಲಕ್ಸ್ ಬಸ್ ನಲ್ಲಿ ಈ ದುರ್ಘಟನೆ ನಡೆದಿದೆ. ಘಟನೆ ಕುರಿತು ಕೆಎಸ್‍ಆರ್‍ಟಿಸಿ ತನಿಖೆಗೆ ಆದೇಶಿಸಿದೆ.
ಸುಲ್ತಾನ್ ಬತ್ತೇರಿ ಡಿಪೋದಿಂದ ತಿರುವನಂತಪುರಕ್ಕೆ ತೆರಳುತ್ತಿದ್ದ ಬಸ್‍ಗೆ ಟಿಕೆಟ್ ನೀಡಲು ಬಳಸುತ್ತಿದ್ದ ಯಂತ್ರ ಸ್ಫೋಟಗೊಂಡಿದೆ. ಇದಾದ ಬಳಿಕ ಕೆಲ ಸಮಯ ನೆಲದ ಮೇಲೆ ಯಂತ್ರ ಉರಿಯುತ್ತಿತ್ತು ಎಂದು ಕಂಡಕ್ಟರ್ ಹೇಳಿದ್ದಾರೆ. ಸ್ಫೋಟದ ನಂತರ ಕೆಎಸ್‍ಆರ್‍ಟಿಸಿಯ ಐಟಿ ತಂಡ ತಿರುವನಂತಪುರಂನಿಂದ ಬತ್ತೇರಿಗೆ ತೆರಳಿದೆ.
ಹೊಸದಾಗಿ ಖರೀದಿಸಿದ ಯಂತ್ರ ಸ್ಫೋಟಗೊಂಡಿದೆ. ಇದರ ಬೆಲೆ ಸುಮಾರು 13,000 ರೂ. ಎನ್ನಲಾಗಿದೆ. ಯಂತ್ರವನ್ನು ಅತಿಯಾಗಿ ಬಳಸಿದಾಗ ಹೆಚ್ಚಾಗಿ ಬಿಸಿಯಾಗುತ್ತವೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ತಾನು ಹೊಸದನ್ನು ಬಳಸಿದೆ ಎಂದು ನಿರ್ವಾಹಕ ಹೇಳಿದ್ದಾರೆ. ಆದರೆ ಹೊಸ ಯಂತ್ರ ಖರೀದಿಗೆ ಸಂಬಂಧಿಸಿದಂತೆ ಈಗಾಗಲೇ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿವೆ.