ಕಾಸರಗೋಡು: ರಾಜ್ಯದಲ್ಲಿ ಓಮಿಕ್ರಾನ್ ಪೀಡಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ೧೮೧ಕ್ಕೆ ಹೆಚ್ಚಳಗೊಂಡು ಆತಂಕ ಮೂಡಿಸಿದೆ.
ನಿನ್ನೆಯ ವರದಿಯ ಅನುಸಾರ ಕಾಸರಗೋಡಿನ ವ್ಯಕ್ತಿಯೋರ್ವರಿಗೆ ಸೋಂಕು ದೃಢಪಟ್ಟಿದ್ದು, ಜಿಲ್ಲೆಯ ಮೊದಲ ಪ್ರಕರಣವಾಗಿದೆ.
ಮಧೂರು ಗ್ರಾ.ಪಂ. ವ್ಯಾಪ್ತಿಯ ಗಲ್ಪ್ ನಿಂದ ಆಗಮಿಸಿದ ಮಧ್ಯವಯಸ್ಕ ವ್ಯಕ್ತಿಗೆ ಓಮಿಕ್ರಾನ್ ದೃಢಪಡಿಸಲಾಗಿದೆ.ಇವರೀಗ ಆರೋಗ್ಯ ಇಲಾಖೆಯ ನಿರೀಕ್ಷಣೆಯಲ್ಲಿದ್ದು ಸಂಪರ್ಕ ಪಟ್ಟಿ ಪರಿಶೋಧನೆಯಲ್ಲಿದೆ.