ಕಾಸರಗೋಡು: ಹಿರಿಯ ಧಾರ್ಮಿಕ ಮುಖಂಡ, ಜಿಲ್ಲೆಯ ಪ್ರಮುಖ ತಂತ್ರವಿದ್ಯಾ ಪ್ರವೀಣ ಪನಯಾಲ್ ಸನಿಹದ ಅರವತ್ ನಿವಾಸಿ ಕೆ.ಯು ದಾಮೋದರ ತಂತ್ರಿ(80)ಪನಯಾಲ್ ಅರವತ್ ಇಲ್ಲಂನಲ್ಲಿ ಸೋಮವಾರ ನಿಧನರಾದರು. ಜಿಲ್ಲೆಯ ತಂತ್ರಿವರ್ಯರಲ್ಲಿ ಪ್ರಮುಖರಾಗಿದ್ದರು. ಕಾಸರಗೋಡು, ದ.ಕ ಹಾಗೂ ಕೊಡಗು ಜಿಲ್ಲೆಗಳ 200ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ತಾಂತ್ರಿಕ ಸ್ಥಾನ ಹೊಂದಿದ್ದರು. ಅಚ್ಚೇರಿ ಶ್ರೀ ಮಹಾವಿಷ್ಣು ಕ್ಷೇತ್ರ, ಕರಿಚ್ಚೇರಿ ಶ್ರೀಶಾಸ್ತಾವಿಷಚ್ಣು ಕ್ಷೇತ್ರ, ತನ್ನೋಟ್ ಶ್ರೀ ಮಹಾವಿಷ್ಣು ಕ್ಷೇತ್ರ, ಅರವತ್ ಶ್ರೀ ಸಉಬ್ರಹ್ಮಣ್ಯ ಕ್ಷೇತ್ರ, ಪನ್ನಿಪಳ್ಳಿ ಶ್ರೀ ಪಾರ್ಥಸಾರಥೀ ಕ್ಷೇತ್ರಗಳು ಇವರ ಅಧೀನದಲ್ಲಿರುವ ಕ್ಷೇತ್ರಗಳಾಗಿವೆ. ಅವರು ಪತ್ನಿ, ಪುತ್ರ ಕೆ.ಯು ಪದ್ಮನಾಭ ತಂತ್ರಿ ಸೇರಿದಂತೆ ನಾಲ್ವರು ಮಕ್ಕಳನ್ನು ಅಗಲಿದ್ದಾರೆ.