ನವದೆಹಲಿ: ಭಾರತದಲ್ಲಿ ಬುಧವಾರ ಒಮಿಕ್ರಾನ್ ಸಂಬಂಧಿತ ಅಸ್ವಸ್ಥತೆಯಿಂದ ಮೊದಲ ಸಾವು ಸಂಭವಿಸಿದೆ. ವೇಗವಾಗಿ ಹರಡುವ ಈ ಕೊರೊನಾ ರೂಪಾಂತರ ತಳಿ ಸೋಂಕಿತ ವ್ಯಕ್ತಿಯೊಬ್ಬರು ರಾಜಸ್ಥಾನದಲ್ಲಿ ಮೃತಪಟ್ಟಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.

ದೇಶದಲ್ಲಿ ಸದ್ಯ ಒಮಿಕ್ರಾನ್ ಸೋಂಕಿತರ ಸಂಖ್ಯೆ 2,135ಕ್ಕೆ ಏರಿದ್ದು, ವಿವಿಧ ರಾಜ್ಯಗಳು ಸೋಂಕು ತಡೆಗೆ ರಾತ್ರಿ ಕರ್ಫ್ಯೂ, ಶಾಲೆಗಳ ಬಂದ್ ಮಾರ್ಗವನ್ನು ಹಿಡಿದಿವೆ. 23 ರಾಜ್ಯಗಳಲ್ಲಿ ಈ ಹೊಸ ರೂಪಾಂತರ ತಳಿ ಕಾಣಿಸಿಕೊಂಡಿದ್ದು, ಮಹಾರಾಷ್ಟ್ರದಲ್ಲಿ ಅತ್ಯಧಿಕ 653 ಪ್ರಕರಣ ದೃಢಪಟ್ಟಿವೆ. 464 ಪ್ರಕರಣಗಳೊಂದಿಗೆ ದೆಹಲಿ ಎರಡನೇ ಸ್ಥಾನದಲ್ಲಿದೆ.
ಬುಧವಾರ ದೇಶದಲ್ಲಿ 58,097 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ನಿನ್ನೆಗಿಂತ ಶೇಕಡ 55ರಷ್ಟು ಹೆಚ್ಚಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2,14,004ಕ್ಕೆ ಜಿಗಿದಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.