ಮಂಜೇಶ್ವರ: ಕೋಳ್ಯೂರು ಶ್ರೀಶಂಕರನಾರಾಯಣ ದೇವಸ್ಥಾನದ ವರ್ಷಾವಧಿ ಜಾತ್ರೆ ಹಾಗೂ ಮಂಡಲ ಪೂಜೆ ಇಂದಿನಿಂದ ಆರಂಭಗೊಳ್ಲಲಿದೆ.
ಇಂದು ಸಂಜೆ 6.30ಕ್ಕೆ ಭಜನೆ, 7ಕ್ಕೆ ಪ್ರಾರ್ಥನೆ, ದೇವರಿಗೆ ಕಾರ್ತಿಕ ಪೂಜೆ, ಬಲಿ ಉತ್ಸವ ನಡೆಯಲಿದೆ. ನಾಳೆ ಬೆಳಿಗ್ಗೆ 6ಕ್ಕೆ ಉಷಃ ಪೂಜೆ, ಶ್ರೀನಾರಾಯಣ ದೇವರ ಬಲಿ ಉತ್ಸವ, ಬೆಳಿಗ್ಗೆ 9.30 ರಿಂದ ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆ, ಬಲಿ ಉತ್ಸವ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ಸಂಜೆ 7.30 ರಿಂದ ಬಯ್ಯತಬಲಿ, ಕಟ್ಟೆಪೂಜೆ, ಉತ್ಸವ, ರಾತ್ರಿಯ ಬಲಿಪೂಜೆ ನಡೆಯಲಿದೆ. ಸೋಮವಾರ ಬೆಳಿಗ್ಗೆ 9 ಕ್ಕೆ ಶ್ರೀದೇವರ ಬಲಿ ಉತ್ಸವ, ಬಟ್ಲು ಕಾಣಿಕೆ, ರಾಜಾಂಗಣ ಪ್ರಸಾದ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ರಂಗಪೂಜೆ, ಶ್ರೀಭೂತಬಲಿ ಉತ್ಸವ, ಮಂತ್ರಾಕ್ಷತೆ ನಡೆಯಲಿದೆ. ಬುಧವಾರ ರಾತ್ರಿ ಮಹಾಗಣಪತಿ ದೇವರಿಗೆ ಮೂಡಪ್ಪ ಸೇವೆ, ಬಲಿ ಉತ್ಸವ ನಡೆಯಲಿದೆ. ಜ.8 ರಂದು ರಾತ್ರಿ 7 ಕ್ಕೆ ಭಂಡಾರ ಇಳಿದು ರಾತ್ರಿ 9 ರಿಂದ ಮಂದ್ರಾಯಿ ದೈವದ ನೇಮ ನಡೆಯಲಿದೆ.