ಪೆರ್ಲ: ಕಣ್ಣೂರು ಇಂಡಸ್ಟ್ರಿಯಲ್ ಕೆಮೆಸ್ಟ್ರಿ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಹರ್ಷಿತಾ ಕೆ.ಆರ್ ಅವರ 'ಸ್ಟಡೀಸ್ ಆನ್ ದ ಅಪ್ಲಿಕೇಶನ್ಸ್ ಆಫ್ ನ್ಯೂ ಚಾಕೋನ್ ಡಿರೈವೇಟಿವ್ಸ್ ಆಂಡ್ ದೆಯರ್ ಮನೋಕೊಂಪೋಸಿಟ್ಸ್'ಮಹಾ ಪ್ರಬಂಧಕ್ಕೆ ಮಂಗಳೂರು ವಿಶ್ವ ವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿದೆ. ಇಂಡಸ್ಟ್ರಿಯಲ್ ಕೆಮೆಸ್ಟ್ರಿ ವಿಭಾಗದ ಬಿ.ಕೆ ಸರೋಜಿನಿ ಅವರ ಮಾರ್ಗದರ್ಶನದಲ್ಲಿ ಪ್ರಬಂಧ ತಯಾರಿಸಿದ್ದರು. ಪುತ್ತೂರು ನೆಲಪ್ಪಾಲು ನಿವಾಸಿ ಸಂತೋಷ್ ಅವರ ಪತ್ನಿಯಾಗಿರುವ ಇವರು ಪೆರ್ಲ ವಾಣೀನಗರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ ಹಳೇ ವಿದ್ಯಾರ್ಥಿನಿ ಹಾಗೂ ಶಾಲಾ ನಿವೃತ್ತ ಶಿಕ್ಷಕಿ ಕಿಶೋರಿ-ದಿ.ರಾಮಚಂದ್ರ ದಂಪತಿ ಪುತ್ರಿ.