ಸಮರಸ ಚಿತ್ರ ಸುದ್ದಿ:ಬದಿಯಡ್ಕ: ಮಲಯಾಳ ಚಿತ್ರರಂಗದ ಖ್ಯಾತ ನಟ, ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯ ಕೃಷ್ಣ ಕುಮಾರ್ ಅವರು ಗುರುವಾರ ಎಡನೀರುಮಠಕ್ಕೆ ಭೇಟಿ ನೀಡಿ, ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಆಶೀರ್ವಾದ ಪಡೆದುಕೊಂಡರು. ಕುಂಟಾರು ರವೀಶ ತಂತ್ರಿ, ಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ ಮುಂತಾದವರು ಉಪಸ್ಥಿತರಿದ್ದರು.