ಕಾಸರಗೋಡು: ಕೋವಿಡ್ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ರೆಸಿಡೆಂಟ್ ಅಸೋಸಿಯೇಶನ್‍ಗಳು ಹಾಗೂ ವಾರ್ಡುಮಟ್ಟದ ಜಾಗ್ರತಾ ಸಮಿತಿಗಳು ತುರ್ತು ಮುಂಜಾಗ್ರತಾ ಕ್ರಮ ಕಐಗೊಳ್ಳುವಂತೆ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್‍ಚಂದ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕ್ಲಸ್ಟರ್‍ಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಅಪಾರ್ಟ್‍ಮೆಂಟ್ ವಠಾರ, ಹೋಟೆಲ್, ಅಂಗಡಿಗಳು, ಲ್ಬ್‍ಗಳು, ಮಾಲ್ ಮುಂತಾದೆಡೆ ಸೋಂಕು ವ್ಯಾಪಿಸದಿರುವಂತೆ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ಕೋವಿಡ್ ಮಾನದಂಡ ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಜಿಮ್‍ಗಳು, ಈಜುಕೊಳಗಳು, ಸಭಾಂಗಣಗಳ ಬಳಕೆಗೆ ಫೆ. 15ರ ವರೆಗೆ ನಿಯಂತ್ರಣ ಹೇರಲಾಗಿದೆ. ಕೋವಿಡ್ ಮಾನದಂಡ ಪಾಲಿಸುವುದರೊಂದಿಗೆ ನಿಯಂತ್ರಣಕ್ಕಾಗಿ ಎಲ್ಲರೂ ಸಹಕರಿಸುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.