ಕೋಝಿಕ್ಕೋಡ್: ಕೇರಳಕ್ಕೆ ಕೇಂದ್ರ ಸರ್ಕಾರ ಮತ್ತೊಂದು ಮೆಮೊ ರೈಲು ಮಂಜೂರು ಮಾಡಿದೆ. ಹೊಸ ರೈಲು ಮಂಗಳೂರು-ಕಣ್ಣೂರು ಮಾರ್ಗದಲ್ಲಿ ಸಂಚರಿಸಲಿದೆ. ಗಣರಾಜ್ಯೋತ್ಸವ ದಿನದಂದು ರೈಲು ಸಂಚಾರ ಆರಂಭಿಸಲಿದೆ.
ದಕ್ಷಿಣ ರೈಲ್ವೇ ಪ್ರಧಾನ ವ್ಯವಸ್ಥಾಪಕರೊಂದಿಗೆ ಕೇರಳ ಸಂಸದರು ನಡೆಸಿದ ಸಭೆಯಲ್ಲಿ ಈ ಭರವಸೆ ನೀಡಲಾಗಿದೆ. ಇದು 12 ಬೋಗಿಗಳ ರೈಲಾಗಿರುತ್ತದೆ. ಆದರೆ ಸಮಯ ನಿಗದಿಯಾಗಿಲ್ಲ.