ಮಂಜೇಶ್ವರ: ಪಂಜಾಬ್ ಘಟನೆ ಸಂಬಂಧಿಸಿ ನರೇಂದ್ರಮೋದಿ ಯವರ ಆಯುಷ್ಯ ವೃದ್ದಿಗಾಗಿ ಬಂಗ್ರ ಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಮೃತ್ಯುಂಜಯ ಜಪ ಪೂಜೆ ಹಾಗೂ ವಿಶೇಷ ಪೂಜೆ ಗುರುವಾರ ರಾತ್ರಿ ನಡೆಯಿತು. ಈ ವೇಳೆ ಬಿಜೆಪಿ ಮಹಿಳಾ ಮೋರ್ಚಾ ರಾಷ್ಟ್ರೀಯ ಸಮಿತಿ ಸದಸ್ಯೆ ಅಶ್ವಿನಿ ಎಂ.ಎಲ್ ಪಜ್ವ, ಬಿಜೆಪಿ ಮಂಡಲ ಅಧ್ಯಕ್ಷ ಆದರ್ಶ ಬಿಎಂ, ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಅಶಲತಾ ಪೆಲಪ್ಪಾಡಿ, ಹಾಗೂ ಬಿಜೆಪಿ ಕಾಳಿಕಾಂಬ ಬೂತ್ ಸಮಿತಿಯ ದಿನಕರ್ ಬಿ.ಎಂ, ಬಿಜೆಪಿ ಮಂಜೇಶ್ವರ ಪಂಚಾಯತಿ ಸಮಿತಿ ಕಾರ್ಯದರ್ಶಿ ಗುರುಕಿರಣ್ ಉಪಸ್ಥಿತರಿದ್ದರು.