ಮಂಗಳೂರು: ಈ ವರ್ಷದ ಗಣರಾಜ್ಯೋತ್ಸವ ಪರೇಡ್‌ನಿಂದ ಸಮಾಜ ಸುಧಾರಕ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ತಿರಸ್ಕಾರ ವಿವಾದವು ದಕ್ಷಿಣ ಕನ್ನಡ ಮತ್ತು ಉಡುಪಿಯ ಅವಳಿ ಜಿಲ್ಲೆಗಳಲ್ಲಿ ಶೀಘ್ರದಲ್ಲೇ ಕಡಿಮೆಯಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ.
ಬಿಜೆಪಿಗೆ ಹೆಚ್ಚಿನ ಹಿಡಿತವಿಲ್ಲದ ಕೇರಳಕ್ಕಿಂತ ಹೆಚ್ಚಾಗಿ, ಬಿಲ್ಲವರು ಹೆಚ್ಚಿನ ಸಂಖ್ಯೆಯಲ್ಲಿರುವ ಕರಾವಳಿ ಜಿಲ್ಲೆಗಳಲ್ಲಿ ಸ್ತಬ್ಧ ಚಿತ್ರ ತಿರಸ್ಕಾರ ವಿವಾದ ರಾಜಕೀಯ ಪತನದ ಬಗ್ಗೆ ಕೇಸರಿ ಪಕ್ಷವನ್ನು ಚಿಂತೆಗೀಡು ಮಾಡಿದೆ. ಈ ಸಂಬಂಧ ಹಲವಾರು ಬಿಲ್ಲವ ಸಂಘಗಳು ಮತ್ತು ನಾರಾಯಣ ಗುರುಗಳ ಅನುಯಾಯಿಗಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದು, ಬಿಜೆಪಿ ಸರ್ಕಾರ ಸಮಾಜ ಸುಧಾರಕನನ್ನು 'ಅವಮಾನಿಸಿದೆ' ಎಂದು ಆರೋಪಿಸಿವೆ. ಪ್ರತಿಪಕ್ಷಗಳು ಕೂಡಾ ಆಡಳಿತ ಪಕ್ಷವನ್ನು ಟೀಕಿಸಿವೆ.
ಕೇಂದ್ರವನ್ನು ಕಟುವಾಗಿ ಟೀಕಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಬಿಲ್ಲವರಾದ ಬಿ ಜನಾರ್ದನ ಪೂಜಾರಿ ಅವರು ಜನವರಿ 26 ರಂದು ಮಂಗಳೂರಿನಲ್ಲಿ ಗುರುಗಳ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಸಲು ನಿರ್ಧರಿಸಿದ್ದಾರೆ ಮತ್ತು ಅದಕ್ಕಾಗಿ ಅಂದು ಜನರು ಒಗ್ಗೂಡಿ ಪ್ರಾರ್ಥನೆಗಳನ್ನು ನಡೆಸಬೇಕೆಂದು ಕರೆ ನೀಡಿದ್ದಾರೆ.
ಈ ಮಧ್ಯೆ ಪರಿಸ್ಥಿತಿಯನ್ನು ಸುಧಾರಿಸಲು ಬಿಜೆಪಿ ತನ್ನ ಉನ್ನತ ಬಿಲ್ಲವ ನಾಯಕರನ್ನು ನಿಯೋಜಿಸುವ ಮೂಲಕ ರಕ್ಷಣಾತ್ಮಕವಾಗಿ ಸಾಗಿದೆ. ಸ್ತಬ್ಧಚಿತ್ರ ತಿರಸ್ಕಾರದ ಹಿಂದೆ ಕೇರಳದ ಸಿಪಿಐ(ಎಂ) ಕಾಂಗ್ರೆಸ್ ಪಿತೂರಿಯಿದೆ ಎಂದು ಇಂಧನ ಸಚಿವ ವಿ ಸುನೀಲ್ ಕುಮಾರ್ ಮತ್ತು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮತ್ತಿತರ ಬಿಜೆಪಿಯ ಬಿಲ್ಲವ ನಾಯಕರು ಹೇಳುತ್ತಿದ್ದಾರೆ.
ಈ ಮುಖಂಡರು ಪತ್ರಿಕಾಗೋಷ್ಠಿ ನಡೆಸುವುದಲ್ಲದೆ, ಗುರುಗಳು ಸ್ಥಾಪಿಸಿದ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನಕ್ಕೂ ಭೇಟಿ ನೀಡಿ ಸಮಸ್ಯೆಯ ಬಗ್ಗೆ ಸ್ಪಷ್ಟತೆ ಮೂಡಿಸುತ್ತಿದ್ದಾರೆ.