ಕಾಸರಗೋಡು: ಕೇಂದ್ರ ಕೃಷಿಕರ ಸಹಾಯ ಯೋಜನೆಯಾದ 'ಪಿ.ಎಂ ಕುಸುಮ್ ಕೊಂಪೋನೆಂಟ್ ಬಿ'ಯ ನೋಂದಾವಣಾ ಕಾರ್ಯಕ್ರಮ ಅನರ್ಟ್ ಜಿಲ್ಲಾ ಕಚೇರಿಗಳ ಮೂಲಕ ಆರಂಭಿಸಲಾಗಿದೆ. ಯೋಜನೆಯನ್ವಯ ವಿದ್ಯುತೇತರ ಕೃಷಿ ಬಳಕೆಯ ಪಂಪುಗಳನ್ನು ಸೋಲಾರ್ ಪಂಪುಗಳಾಗಿ ಬದಲಾಯಿಸಿ ಇಂಧನ ಬೆಲೆಯ ಲಾಭ ಪಡೆಯಲು ಸಾಧ್ಯವಾಗಲಿದೆ.
ಯೋಜನೆಯನ್ವಯ ಕೃಷಿಕರು ಅಳವಡಿಸುವ ಪಂಪುಗಳಿಗೆ ಕೇಂದ್ರ-ರಾಜ್ಯ ಸರ್ಕಾರದಿಂದ ಶೇ. 60ರ ಸಬ್ಸಿಡಿ ಲಭ್ಯವಾಗಲಿದೆ. ಒಂದರಿಂದ 10 ಎಚ್.ಪಿ ಸಾಮಥ್ರ್ಯದ ಪಂಪುಗಳನ್ನು ಅಳವಡಿಸಬಹುದಾಗಿದೆ. ಒಂದು ಎಚ್.ಪಿ ಸಾಮಥ್ರ್ಯದ ಪಂಪು ಅಳವಡಿಸಲು ಸಬ್ಸಿಡಿ ಕಳೆದು 42 211ರೂ. ವೆಚ್ಚ ತಗುಲುವುದು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ(04994 230944, 9188119414)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.