ಪುಣೆ: ಫೋಟೋಗ್ರಾಫರ್ ಓರ್ವ ಕ್ಲಿಕ್ಕಿಸಿದ ಫೋಟೋಗಳಲ್ಲಿ ನಗ್ನತೆ ಇದ್ದ ಕಾರಣದಿಂದಾಗಿದೆ ಪುಣೆ ಕಲಾ ಗ್ಯಾಲರಿಯಲ್ಲಿ ಆ ಫೋಟೋಗಳ ಪ್ರದರ್ಶನವನ್ನು ತಡೆಯಲಾಗಿದೆ.
ಬಾಲಗಂಧರ್ವ್ ರಂಗಮಂದಿರದಲ್ಲಿ ಈ ಕಲಾ ಗ್ಯಾಲರಿ ಇದ್ದು, ಫೋಟೋಗ್ರಾಫರ್ ಅಕ್ಷಯ್ ಮಾಲಿ ಅವರ ಫೋಟೋಗಳ ಪ್ರದರ್ಶನವನ್ನು ತಡೆಯಲಾಗಿದೆ. " ಆ ಫೋಟೋಗ್ರಾಫರ್ ನ ಚಿತ್ರ/ಫೋಟೋಗಳಲ್ಲಿ ನಗ್ನತೆಯ ಅಂಶಗಳಿದ್ದವು. ಇದು ಮತ್ತೊಬ್ಬರ ಭಾವನೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಕಲಾ ಗ್ಯಾಲರಿಯಲ್ಲಿ ಈ ರೀತಿಯ ಫೋಟೊಗಳು ಸೂಕ್ತವಾಗಿ ಕಾಣುವುದಿಲ್ಲ ಆದ್ದರಿಂದ ಅನುಮತಿ ನಿರಾಕರಿಸಲಾಗಿದೆ" ಎಂದು ಕಲಾ ಗ್ಯಾಲರಿಯ ಆಡಳಿತ ಮಂಡಳಿ ತಿಳಿಸಿದೆ.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಅಕ್ಷಯ್ ಮಾಲಿ, ತಾವು ಪ್ರದರ್ಶನಕ್ಕೆ ನೋಂದಣಿ ಮಾಡಿಕೊಳ್ಳುವಾಗಲೇ ನಗ್ನತೆಯ ಅಂಶಗಳಿರುವ ಚಿತ್ರಗಳ ಪ್ರದರ್ಶನಕ್ಕೆ ಅವಕಾಶವಿಲ್ಲವೆಂದು ಸ್ಪಷ್ಟಪಡಿಸಬೇಕಿತ್ತು ಎಂದು ಹೇಳಿದ್ದಾರೆ. ನೋಂದಣಿ ಮಾಡಿಕೊಳ್ಳಬೇಕಾದರೆ ನಾನು ಫೋಟೋಗ್ರಫಿ ಪ್ರದರ್ಶನ ಎಂದಷ್ಟೇ ಹೇಳಿದ್ದೆ ಎಂದು ಅಕ್ಷಯ್ ಮಾಲಿ ತಿಳಿಸಿದ್ದಾರೆ.