HEALTH TIPS

ಕೊರೊನಾವೈರಸ್ ಲಸಿಕೆ ಪಡೆದ ಮಕ್ಕಳಿಗೆ "ಪೇನ್ ಕಿಲ್ಲರ್" ನೀಡಲೇಬಾರದು!?

              ನವದೆಹಲಿ: ಭಾರತದಲ್ಲಿ 15 ರಿಂದ 18 ವಯಸ್ಸಿನ ಮಕ್ಕಳಿಗೂ ಕೊರೊನಾವೈರಸ್ ಲಸಿಕೆ ನೀಡುವ ಅಭಿಯಾನಕ್ಕೆ ಈಗಾಗಲೇ ಚಾಲನೆ ನೀಡಿ ಆಗಿದೆ. ಈ ಹಂತದಲ್ಲಿ ಪೋಷಕರು ತಿಳಿದುಕೊಳ್ಳಬೇಕಾದ ಅಗತ್ಯವಾದ ವಿಷಯವನ್ನು ಭಾರತ್ ಬಯೋಟೆಕ್ ಸಂಸ್ಥೆಯು ಹೊರ ಹಾಕಿ

            ಕೊವ್ಯಾಕ್ಸಿನ್ ಲಸಿಕೆಯನ್ನು ಪಡೆದುಕೊಳ್ಳುವ ಯಾವುದೇ ಮಕ್ಕಳಿಗೆ ಪೇನ್ ಕಿಲ್ಲರ್(ನೋವು ನಿವಾರಕ ಔಷಧಿ) ಅಥವಾ ಪ್ಯಾರಾಸಿಟಮಲ್ ಔಷಧಿಗಳನ್ನು ನೀಡುವಂತಿಲ್ಲ ಎಂದು ಕೊರೊನಾವೈರಸ್ ಲಸಿಕೆ ಕೊವ್ಯಾಕ್ಸಿನ್ ಅನ್ನು ಉತ್ಪಾದಿಸುವ ಭಾರತ್ ಬಯೋಟೆಕ್ ಸಂಸ್ಥೆಯು ಎಚ್ಚರಿಸಿದೆ.
           ದೇಶದ ಕೆಲವು ಕೊವಿಡ್-19 ಲಸಿಕೆ ಕೇಂದ್ರಗಳಲ್ಲಿ ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆ ನೀಡಿದ ನಂತರದಲ್ಲಿ 500 ಎಂಜಿಯ ಮೂರು ಪ್ಯಾರಾಸಿಟಮಲ್ ಮಾತ್ರೆಗಳನ್ನು ನೀಡಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಸಂಸ್ಥೆಯು ನೋವು ನಿವಾರಕ ಮಾತ್ರೆಗಳನ್ನು ವಿತರಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
           ಪ್ಯಾರಾಸಿಟಮಲ್ ಮಾತ್ರೆ ನೀಡಲು ಶಿಫಾರಸ್ಸು ಮಾಡುವುದಿಲ್ಲ :
         ಕೊವ್ಯಾಕ್ಸಿಲ್ ಲಸಿಕೆಯನ್ನು ಪಡೆದುಕೊಂಡವರಿಗೆ ಯಾವುದೇ ಪ್ಯಾರಾಸಿಟಮಲ್ ಅಥವಾ ನೋವು ನಿವಾರಕಗಳನ್ನು ವಿತರಿಸಬೇಕು ಎಂಬುದರ ಬಗ್ಗೆ ಶಿಫಾರಸ್ಸುಗಳನ್ನು ಮಾಡುವುದಿಲ್ಲ ಎಂದು ಭಾರತ್ ಬಯೋಟೆಕ್ ಸಂಸ್ಥೆಯು ಸ್ಪಷ್ಟಪಡಿಸಿದೆ. ಪ್ಯಾರಾಸಿಟಮಲ್ ಔಷಧಿಯನ್ನು ಇತರೆ ಕೊವಿಡ್-19 ಲಸಿಕೆಗಳನ್ನು ವಿತರಿಸಿದ ಸಂದರ್ಭದಲ್ಲಿ ನೀಡುವುದಕ್ಕೆ ಶಿಫಾರಸ್ಸು ಮಾಡಲಾಗಿದೆ. ಆದರೆ ಕೊವ್ಯಾಕ್ಸಿನ್ ಲಸಿಕೆಯನ್ನು ನೀಡಿದವರಿಗೆ ಈ ಪ್ಯಾರಾಸಿಟಮಲ್ ಔಷಧಿಯ ಅಗತ್ಯ ಇರುವುದಿಲ್ಲ ಎಂದು ಸಂಸ್ಥೆಯು ತಿಳಿಸಿದೆ.
              ಕೊವ್ಯಾಕ್ಸಿನ್ ಪಡೆದ ಬಳಿಕ ಔಷಧಿ ಅನಿವಾರ್ಯವಲ್ಲ:
         "ಕೊವ್ಯಾಕ್ಸಿನ್ ಲಸಿಕೆಗೆ ಸಂಬಂಧಿಸಿದಂತೆ ನಡೆಸಿದ ವೈದ್ಯಕೀಯ ಪ್ರಯೋಗಗಳ ಸಂದರ್ಭದಲ್ಲಿ 30,000 ಜನರನ್ನು ಬಳಸಿಕೊಳ್ಳಲಾಗಿದ್ದು, ಈ ವೇಳೆ ಸುಮಾರು 10 ರಿಂದ 12ರಷ್ಟು ವ್ಯಕ್ತಿಗಳಲ್ಲಿ ಅಡ್ಡ ಪರಿಣಾಮ ಗೋಚರಿಸಿತ್ತು. ಈ ಪೈಕಿ ಎಲ್ಲವೂ ಸೌಮ್ಯವಾಗಿದ್ದು ಒಂದರಿಂದ ಎರಡು ದಿನಗಳಲ್ಲಿ ನಿವಾರಣೆ ಆಯಿತು. ಇದಕ್ಕಾಗಿ ನೀವು ಪ್ರತ್ಯೇಕವಾಗಿ ಔಷಧಿಗಳನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ನೀವು ವೈದ್ಯರನ್ನು ಸಂಪರ್ಕಿಸಿ ತೀರಾ ಅಗತ್ಯ ಎನಿಸಿದ ಸಂದರ್ಭದಲ್ಲಿ ಮಾತ್ರ ಔಷಧಿಗಳನ್ನು ತೆಗೆದುಕೊಳ್ಳಬೇಕು," ಎಂದು ಭಾರತ್ ಬಯೋಟೆಕ್ ತಿಳಿಸಿದೆ.
              ಕೊವ್ಯಾಕ್ಸಿನ್ ಲಸಿಕೆ ಬಳಕೆಗೆ 12 ತಿಂಗಳ ಅವಧಿ :
          ಭಾರತದಲ್ಲಿ ವಿತರಣೆ ಮಾಡಲಾಗುತ್ತಿರುವ ಕೊವ್ಯಾಕ್ಸಿನ್ ಲಸಿಕೆ ಜೀವಿತಾವಧಿ ಬಗ್ಗೆ ಕೇಂದ್ರ ಔಷಧೀಯ ನಿಯಂತ್ರಣ ಸಂಸ್ಥೆಯು ಅನುಮೋದನೆ ನೀಡಿದೆ. ಹೆಚ್ಚುವರಿ ಸ್ಥಿರ ದತ್ತಾಂಶವನ್ನು ಪರಿಶೀಲಿಸಿ ಕೊವ್ಯಾಕ್ಸಿನ್ ಲಸಿಕೆಯನ್ನು ಬಳಸುವ ಅವಧಿಯನ್ನು ವಿಸ್ತರಿಸಿರುವ ಬಗ್ಗೆ ನೀಡಿರುವ ಅನುಮೋದನೆ ಕುರಿತು ಭಾರತ್ ಬಯೋಟೆಕ್ ಸಂಸ್ಥೆಯು ಟ್ವೀಟ್ ಮಾಡಿದೆ. ಕೊವ್ಯಾಕ್ಸಿನ್ ಲಸಿಕೆಯನ್ನು ಉತ್ಪಾದಿಸಿದ ನಂತರ ಅದರ ಬಳಕೆ ಅವಧಿಯನ್ನು 12 ತಿಂಗಳವರೆಗೆ ವಿಸ್ತರಿಸಲಾಗಿದೆ ಎಂದು ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆಯು ತಿಳಿಸಿದೆ.
              ಶೇ.77ರಷ್ಟು ಪರಿಣಾಮಕಾರಿ ಆಗಿರುವ ಕೊವ್ಯಾಕ್ಸಿನ್ ಲಸಿಕೆ :
          ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದಿಸುತ್ತಿರುವ ಕೊವ್ಯಾಕ್ಸಿನ್ ಲಸಿಕೆಯು ಕೊರೊನಾವೈರಸ್ ವಿರುದ್ಧ ಶೇ.77.8ರಷ್ಟು ಪರಿಣಾಮಕಾರಿಯಾಗಿದೆ. ಅಲ್ಲದೇ ಕೊವಿಡ್-19 ರೂಪಾಂತರ ಡೆಲ್ಟಾ ವೈರಸ್ ವಿರುದ್ಧ ಶೇ.65.2ರಷ್ಟು ಪರಿಣಾಮಕಾರಿಯಾಗಿದೆ. ಜೂನ್ ತಿಂಗಳಿನಲ್ಲಿ 3ನೇ ಹಂತದ ವೈದ್ಯಕೀಯ ಪ್ರಯೋಗಗಳಿಗೆ ಸಂಬಂಧಿಸಿದಂತೆ ಅಂತಿಮ ವಿಶ್ಲೇಷಣೆಯನ್ನು ಪೂರ್ಣಗೊಳಿಸಲಾಗಿದೆ ಎಂದು ಭಾರತ್ ಬಯೋಟೆಕ್ ಕಂಪನಿ ಹೇಳಿದೆ.

  

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries