ಕೊಚ್ಚಿ: ಮಕರ ಬೆಳಕು ದರ್ಶನಕ್ಕಾಗಿ ಶಬರಿಮಲೆ ಸನ್ನಿಧಾನಂನಲ್ಲಿ ಸಾವಿರಾರು ಮಂದಿ ಕಾದು ಕುಳಿತಿದ್ದರೆ, ಶಬರಿಮಲೆ ಧರ್ಮಶಾಸ್ತರಿಗೆ ಅಲಂಕರಿಸಲು ಪವಿತ್ರ ತಿರುವಾಭರಣವನ್ನು ಹೊತ್ತ ಮೆರವಣಿಗೆ ಸರಂಕುತ್ತಿ ಕಡೆಗೆ ಸಾಗಿದೆ.
ದೇವಸ್ವಂ ಮಂಡಳಿ ಸದಸ್ಯರು ತಿರುವಾಭರಣ ಹೊತ್ತ ತಂಡವನ್ನು ಸರಂಕುಟ್ಟಿಯಲ್ಲಿ ಭಗವಂತನ ದರ್ಶನಕ್ಕೆ ಬರಮಾಡಿಕೊಳ್ಳಲಿದ್ದಾರೆ. ಶಬರಿಪೇಟೆಯಲ್ಲಿ ವಿಶ್ರಾಂತಿ ಪಡೆದು ತಂಡವು ಸರಂಕುಟ್ಟಿಗೆ ತೆರಳಲಿದೆ. 18ನೇ ಮೆಟ್ಟಿಲು ಹತ್ತಿ ತರಲಾಗಿವ ತಿರುವಾಭರಣವನ್ನು ಅಯ್ಯಪ್ಪ ಸ್ವಾಮಿಗೆ ಅಲಂಕರಿಸುತ್ತಿರುವಂತೆ ಅಯ್ಯಪ್ಪ ವ್ರತಧಾರಿಗಳು ಶರಣಂ ಮಂತ್ರ ಮುಗಿಲುಮುಟ್ಟುತ್ತದೆ. ಅಷ್ಟರಲ್ಲಿ ಆಕಾಶದಲ್ಲಿ ಸುತ್ತುತ್ತಿರುವ ಗಿಡುಗ ಸನ್ನಿಧಾನಕ್ಕೆ ಪ್ರದಕ್ಷಿಣೆ ಬರುತ್ತದೆ.