ಕಾಸರಗೋಡು: ಚಿನ್ಮಯಾ ಮಿಷನ್ನಿನ 'ವಸತಿ ರಹಿತರಿಗೊಂದು ಮನೆ' ನಿರ್ಮಾಣ ಯೋಜನೆಯ ಆರನೇ ಮನೆಯನ್ನು ಕಾಸರಗೋಡು ನೆಲ್ಲಿಕುಂಜೆ ಗಂಗಾ ಕಡಪ್ಪರದ ಉಮಾ ಕಡಪ್ಪರ ಇವರಿಗೆ ನಿರ್ಮಿಇಸಕೊಡಲು ತೀರ್ಮಾನಿಸಲಾಗಿದ್ದು, ಮನೆಯ ಭೂಮಿ ಪೂಜೆ ಹಾಗೂ ಕುತ್ತಿ ಪೂಜೆ ವಿಧಿ ನೆರವೇರಿಸಲಾಯಿತು.
ಆದೂರು ಶ್ರೀ ಭಗವತಿ ಕ್ಷೇತ್ರದ ಆಚಾರ ಸ್ಥಾನಿಕ ಮಾಧವ ಕಾರ್ಣವ ಅವರ ನೇತೃತ್ವದಲ್ಲಿ ಚಿನ್ಮಯ ಮಿಷನ್ ಕೇರಳ ರಾಜ್ಯದ ಮುಖ್ಯಸ್ಥ ಸ್ವಾಮಿ ವಿವಿಕ್ತಾನಂದ ಸರಸ್ವತಿ ಭೂಮಿ ಪೂಜೆ ನೆರವೇರಿಸಿದರು . ಕಾರ್ಯಕ್ರಮದಲ್ಲಿ ಕಾಸರಗೋಡು ನಗರಸಭಾ ಸದಸ್ಯೆ ಸವಿತಾ ಈಶ್ವರ ಭಟ್, ಚಿನ್ಮಯ ಮಿಷನ್ ಸೆಕ್ರೆಟರಿ ಕೆ .
ಬಾಲಚಂದ್ರನ್, ಎಂ. ಅನಿಲ್ ಕುಮಾರ್, ಕೆ. ಜಿ ಮನೋಹರನ್ , ಬಿ. ಪುಷ್ಪರಾಜ್ , ವಿ. ರಾಘವನ್, ಪಿಂಕು , ದಿನೇಶ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು .
ಚಿನ್ಮಯ ಜನ್ಮಶತಾಬ್ದಿ ಸಂದರ್ಭದಲ್ಲಿ ಚಿನ್ಮಯ ಮಿಷನ್ ಘೋಷಿಸಿದ ವಸತಿ ರಹಿತರಿಗೊಂದು ಮನೆ (Home for home Iess) ಯೋಜನೆಯ ಅಂಗವಾಗಿ ಬಡ ಜನತೆಗೆ ಉಚಿತವಾಗಿ ಮನೆ ನಿರ್ಮಿಸಿಕೊಡಲಾಗುತ್ತಿದೆ.