ಕಾಸರಗೋಡು: ಪ್ರಥಮ ಕೇರಳ ಒಲಿಂಪಿಕ್ಸ್ ಸ್ಪರ್ಧಾಕೂಟದ ಪೂರ್ವಭಾವಿಯಾಗಿ ಕಾಸರಗೋಡು ಜಿಲ್ಲಾ ಒಲಿಂಪಿಕ್ಸ್ ಅಸೋಸಿಯೇಶನ್ ಆಯೋಜಿಸಿದ ಸ್ಪರ್ಧಾ ಕೂಟ ನೀಲೇಶ್ವರದಲ್ಲಿ ಇತ್ತೀಚೆಗೆ ಜರುಗಿತು. ರಾಜ್ಯ ಬಂದರು-ಪ್ರಾಚ್ಯವಸ್ತು ಖಾತೆ ಸಚಿವ ಅಹಮ್ಮದ್ ದೇವರಕೋವಿಲ್ ಉದ್ಘಾಟಿಸಿದರು. ಶಾಸಕ ಎಂ. ರಾಜಗೋಪಾಳನ್ ಅಧ್ಯಕ್ಷತೆ ವಹಿಸಿದ್ದರು.
ಒಲಿಂಪಿಕ್ಸ್ ಅಸೋಸಿಯೇಶನ್ ಜಿಲ್ಲಾ ಅಧ್ಯಕ್ಷ ಟಿ.ವಿ ಬಾಲನ್, ನೀಲೇಶ್ವರ ನಗರಸಭಾ ಅಧ್ಯಕ್ಷೆ ಟಿ.ವಿ ಶಾಂತಾ, ಬ್ಲಾಕ್ ಪಂಚಾಯಿತಿ ಅಸೋಸಿಯೇಶನ್ ಅಧ್ಯಕ್ಷ ಕೆ. ಮಣಿಕಂಠನ್, ಗ್ರಾಪಂ ಅಸೋಸಿಯೇಶನ್ ಅಧ್ಯಕ್ಷ ಕೆ.ವಿ ವತ್ಸಲನ್ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಪೂರ್ವಭಾವಿಯಾಗಿ ನೀಲೇಶ್ವರ ಕೋನ್ವೆಂಟ್ ಜಂಕ್ಷನ್‍ನಿಂದ ಆರಂಭಗೊಂಡ ಮೆರವಣಿಗೆಗೆ ಜಿಪಂ ಅಧ್ಯಕ್ಚೆ ಬೇಬಿ ಬಾಲಕೃಷ್ಣನ್ ಧ್ವಜ ಬೀಸಿ ಚಾಲನೆ ನೀಡಿದರು. ನಂತರ ನಡೆದ ಸಮಾರಂಭದಲ್ಲಿ ಸಚಿವರು, ಜನಪ್ರತಿನಿಧಿಗಳು, ಕ್ರೀಡಾಪಟುಗಳು ವರ್ಣಮಯ ಬೆಲೂನ್ ಹಾರಿಸುವ ಮೂಲಕ ಸಮಾರಂಭವನ್ನು ಜಂಟಿಯಾಗಿ ಉದ್ಘಾಟಿಸಿದರು.