HEALTH TIPS

ಗಣರಾಜ್ಯೋತ್ಸವ ದಿನಾಚರಣೆ: ಅಠಾರಿ-ವಾಘಾ ಗಡಿಯಲ್ಲಿ ಮೈ ರೋಮಾಂಚನಗೊಳಿಸಿದ ಇಂಡೋ-ಪಾಕ್ ಯೋಧರ ಬೀಟಿಂಗ್ ರೀಟ್ರೀಟ್ ಕಾರ್ಯಕ್ರಮ

             ಅಠಾರಿ: 73ನೇ ಗಣರಾಜ್ಯೋತ್ಸವದ ನಿಮಿತ್ತ ಭಾರತ-ಪಾಕಿಸ್ತಾನದ ಅಟ್ಟಾರಿ-ವಾಘಾ ಗಡಿಯಲ್ಲಿ ಗಡಿ ಭದ್ರತಾ ಪಡೆ (BSF) ಮತ್ತು ಪಾಕಿಸ್ತಾನ ಸೇನಾ ಸಿಬ್ಬಂದಿಗಳು ಐತಿಹಾಸಿಕ ಬೀಟಿಂಗ್ ರೀಟ್ರೀಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. 


              ಭಾರತದ 73ನೇ ಗಣರಾಜ್ಯೋತ್ಸವದಂದು ಬೆಳಗ್ಗೆ ಅಟ್ಟಾರಿ-ವಾಘಾ ಗಡಿಯಲ್ಲಿ ಗಡಿ ಭದ್ರತಾ ಪಡೆ (BSF) ಮತ್ತು ಪಾಕಿಸ್ತಾನ ಸೇನೆಯು ಸಿಹಿತಿಂಡಿ ಮತ್ತು ಶುಭಾಶಯ ವಿನಿಮಯ ಮಾಡಿಕೊಂಡರು. ಪಂಜಾಬ್‌ನ ಅಮೃತಸರ ಬಳಿಯ ಅಟ್ಟಾರಿ-ವಾಘಾ ಗಡಿಯಲ್ಲಿ ಸಂಜೆ ಬೀಟಿಂಗ್ ರಿಟ್ರೀಟ್ ಸಮಾರಂಭ  ನಡೆಯಿತು. ಉಭಯ ದೇಶಗಳ ಸೇನಾ ಸಿಬ್ಬಂದಿಗಳು ಧ್ವಜ ನಮನ ಸಲ್ಲಿಸಿ ಧ್ವಜ ಇಳಿಸುವ ಕಾರ್ಯಕ್ರಮ ನೋಡುಗರ ಕಣ್ಮನ ಸೆಳೆಯಿತು.

              ಇದಕ್ಕೂ ಮೊದಲು ಭಾರತದ 73ನೇ ಗಣರಾಜ್ಯೋತ್ಸವದಂದು (73rd Republic Day) ಬೆಳಗ್ಗೆ ಅಟ್ಟಾರಿ-ವಾಘಾ ಗಡಿಯಲ್ಲಿ ಗಡಿ ಭದ್ರತಾ ಪಡೆ (BSF) ಮತ್ತು ಪಾಕಿಸ್ತಾನ ಸೇನೆಯು ಸಿಹಿತಿಂಡಿ ಮತ್ತು ಶುಭಾಶಯ ವಿನಿಮಯ ಮಾಡಿಕೊಂಡರು. 

               ಈ ಸಂದರ್ಭದಲ್ಲಿ ಬಿಎಸ್ಎಫ್ 176 ಬೆಟಾಲಿಯನ್‌ನ AT ಪಡೆಗಳು 18 BGB ಯ ಪಡೆಗಳೊಂದಿಗೆ ಸಿಹಿತಿಂಡಿ ಮತ್ತು ಶುಭಾಶಯಗಳನ್ನು ವಿನಿಮಯ ಮಾಡಿಕೊಂಡವು. ಇದಲ್ಲದೆ, BSF ಮತ್ತು ಪಾಕಿಸ್ತಾನ ಸೇನೆಯ ನಡುವೆ ಸಿಹಿತಿಂಡಿಗಳು ಮತ್ತು ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು. 

           73 ನೇ ಗಣರಾಜ್ಯೋತ್ಸವದಲ್ಲಿ ಭಾಗವಹಿಸುವ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಿಗ್ಗೆ ನವದೆಹಲಿಯಲ್ಲಿ ಹೊಸದಾಗಿ ನಿರ್ಮಿಸಲಾದ ರಾಷ್ಟ್ರೀಯ ಯುದ್ಧ ಸ್ಮಾರಕ (NWM) ನಲ್ಲಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ  ಖಾತೆ ರಾಜ್ಯ ಸಚಿವ ಅಜಯ್ ಭಟ್, ರಕ್ಷಣಾ ಕಾರ್ಯದರ್ಶಿ, ಅಜಯ್ ಕುಮಾರ್ ಮತ್ತು ಭಾರತೀಯ ಸಶಸ್ತ್ರ ಪಡೆಗಳ ಮುಖ್ಯಸ್ಥರು, ಅಂದರೆ ಸೇನೆ, ವಾಯುಪಡೆ ಮತ್ತು ನೌಕಾಪಡೆಯ ಮುಖ್ಯಸ್ಥರು ಉಪಸ್ಥಿತರಿದ್ದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries