ಬದಿಯಡ್ಕ: ಕನ್ನಡಿಗರು ಸ್ವ ಭಾಷಾಭಿಮಾನದೊಮದಿಗೆ ಭಾಷಾ ಸಹಿಷ್ಣುಗಳು. ಎಲ್ಲಾ ಭಾಷೆಗಳ ಮೇಲೂ ಅಭಿಮಾನವಿರುವ ಕನ್ನಡಿಗರು ಗಡಿನಾಡು ಕಾಸರಗೋಡಿನ ಸಾಮಾಜಿಕ, ಸಾಂಸ್ಕøತಿಕ ಶ್ರೀಮಂತಿಕೆಗೆ ಕಾರಣರಾದವರು ಎಂದು ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಅವರು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ನೇತೃತ್ವದಲ್ಲಿ ಬದಿಯಡ್ಕದ ಶ್ರೀಭಾರತೀ ವಿದ್ಯಾಪೀಠದ ಸಹಕಾರದೊಮದಿಗೆ ವಿದ್ಯಾಪೀಠದಲ್ಲಿ ಶನಿವಾರ ನಡೆದ ಕಸಾಪ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದ ಪ್ರಾದೇಶಿಕ ಭಾಷೆಗಳು ಇಂದು ಅಳಿವು-ಉಳಿವಿನ ಸವಾಲನ್ನು ಎದುರಿಸುತ್ತಿದೆ. ವೈವಿಧ್ಯಮಯವಾದ ಭಾಷೆ, ಸಂಸ್ಕøತಿಗಳನ್ನು ಉಳಿಸುವ ಹೊಣೆಗಾರಿಕೆ ನಾಗರಿಕ ಪ್ರಪಂಚದ್ದಾಗಿದೆ. ಭಾಷೆಯ ಅವನತಿಯು ಸಂಸ್ಕøತಿಯ ಅವನತಿಗೆ ಕಾರಣವಾಗುವುದು. ಈ ಹಿನ್ನೆಲೆಯಲ್ಲಿ ಭಾಷೆಗಳ ಬೆಳವಣಿಗೆಗೆ ಪೂರಕವಾದ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು. ಕಾಸರಗೋಡು ಕನ್ನಡಿಗರ ಆಶೋತ್ತರಗಳಿಗೆ ಸ್ಪಂದಿಸುವುದಾಗಿ ಅವರು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎಸ್.ವಿ. ಭಟ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಐಎಎಸ್ ಅಧಿಕಾರಿ ಕೆ.ಗೋಪಾಲಕೃಷ್ಣ ಭಟ್, ಹಿರಿಯಸಾಹಿತಿ ಡಾ.ರಮಾನಂದ ಬನಾರಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು.
ಈ ಸಂದರ್ಭ ಕಾಸರಗೋಡು ಸರ್ಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಿಕೆ ಡಾ.ಆಶಲತಾ ಸಿ.ಕೆ ಅವರ ಅರ್ಧ ಸುರಿದ ಮಳೆ ಕೃತಿಯನ್ನು ಡಾ.ರಮಾನಂದ ಬನಾರಿ ಬಿಡುಗಡೆಗೊಳಿಸಿದರು. ಶ್ರೀಭಾರತಿ ವಿದ್ಯಾಪೀಠದ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಶುಭಾಶಮಸನೆಗೈದರು. ಶಾಲಾ ಪ್ರಬಂಧಕ ಜಯಪ್ರಕಾಶ ಪಜಿಲ, ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಗಣೇಶ್ ಪೈ ಬದಿಯಡ್ಕ ಉಪಸ್ಥಿತರಿದ್ದರು.
ಬಳಿಕ ಕವಯಿತ್ರಿ ರಾಜಶ್ರೀ ಟಿ.ರೈ ಪೆರ್ಲ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಕಸಾಪ ಗೌರವ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಡಿ.ಬಿ ಸ್ವಾಗತಿಸಿ, ಡಾ.ಆಶಲತಾ ಸಿ.ಕೆ ವಂದಿಸಿದರು. ಶೇಖರ ಶೆಟ್ಟಿ ಕೆ. ನಿರೂಪಿಸಿದರು.
ಕಸಾಪ ಕೇರಳ ಗಡಿನಾಡ ಘಟಕದ ನೂತನ ಸಮಿತಿಗೆ ಎಸ್ ವಿ ಭಟ್ (ಅ|ಧ್ಯಕ್ಷ), ಶೇಖರ ಶೆಟ್ಟಿ ಕೆ.ಬಾಯಾರು, ಪ್ರದೀಪ್ ಕುಮಾರ್ ಶೆಟ್ಟಿ ಡಿ.ಬಿ.(ಗೌರವ ಕಾರ್ಯದರ್ಶಿಗಳು), ಡಾ.ರಾಜಗೋಪಾಲ್(ಗೌರವ ಕೋಶಾಧಿಕಾರಿ) ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕವಿತಾ ಕೂಡ್ಲು, ವಿದ್ಯಾವಾಣಿ ಮಠದಮೂಲೆ, ಡಾ.ಆಶಲತಾ ಸಿ.ಕೆ, ಉಮೇಶ್ ನಾಯ್ಕ ಕೆ, ಪ್ರವೀಣ್ ಕುಮಾರ್, ದೇವದಾಸ್ ಕೆ, ನ್ಯಾಯವಾದಿ. ಐ.ವಿ.ಭಟ್, ಡಾ.ಜಯಪ್ರಕಾಶ್ ನಾರಾಯಣ ಟಿ.ಕೆ, ವೇಣುಗೋಪಾಲ ಇ., ರಾಮಚಂದ್ರ ಭಟ್ ಧರ್ಮತ್ತಡ್ಕ ಅವರನ್ನು ಆಯ್ಕೆಮಾಡಲಾಯಿತು.