ನವದೆಹಲಿ: ಅರುಣಾಚಲ ಪ್ರದೇಶದಿಂದ ನಾಪತ್ತೆಯಾಗಿರುವ 17 ವರ್ಷದ ಅಪ್ರಾಪ್ತ ಯುವಕನ ಬಿಡುಗಡೆಗೆ ಚೀನಾ ಸೂಚಿಸಿದ್ದು, ದಿನಾಂಕ ಮತ್ತು ಸಮಯವನ್ನು ಶೀಘ್ರದಲ್ಲೇ ಹಂಚಿಕೊಳ್ಳಲಿದೆ ಎಂದು ಕೇಂದ್ರ ಕಾನೂನು ಮತ್ತು ನ್ಯಾಯಾಂಗ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
ಚೀನಾ ಕೂಡ ಕಾಣೆಯಾಗಿದ್ದ ಅಪ್ಪರ್ ಸಿಯಾಂಗ್ ಜಿಲ್ಲೆಯ ಜಿಡೋ ಗ್ರಾಮದ ನಿವಾಸಿಯಾಗಿರುವ ಮಿರಾಮ್ ಟ್ಯಾರೋನ್ ಎಂಬ ಅಪ್ರಾಪ್ತ ಯುವಕನ ಬಿಡುಗಡೆಯ ಸ್ಥಳವನ್ನು ಸೂಚಿಸಿದೆ ಮತ್ತು ಹವಾಮಾನ ವೈಪರೀತ್ಯದಿಂದಾಗಿ ವಿಳಂಬವಾಗಿದೆ ಎಂದು ಸಚಿವ ಕಿರಣ್ ರಿಜಿಜು ಹೇಳಿದರು.
'ಭಾರತೀಯ ಸೇನೆಯು ಗಣರಾಜ್ಯೋತ್ಸವ ದಿನದಂದು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ(ಪಿಎಲ್ಎ) ಯೊಂದಿಗೆ ಹಾಟ್‌ಲೈನ್ ಮೂಲಕ ಭಾರತದ ಅಪ್ರಾಪ್ತ ಯುವಕನನ್ನು ಹಸ್ತಾಂತರಿಸುವುದಾಗಿ ಪ್ರತಿಕ್ರಿಯಿಸಿದೆ ಮತ್ತು ಬಿಡುಗಡೆಯ ಸ್ಥಳವನ್ನು ಸೂಚಿಸಿದೆ. ಅವರು ಶೀಘ್ರದಲ್ಲೇ ದಿನಾಂಕ ಮತ್ತು ಸಮಯವನ್ನು ತಿಳಿಸುವ ಸಾಧ್ಯತೆಯಿದೆ. ಹವಾಮಾನ ವೈಪರೀತ್ಯದಿಂದಾಗಿ ವಿಳಂಬವಾಗಿದೆ ಎಂದು ಕಿರಣ್ ರಿಜಿಜು ವಿವರಿಸಿದರು.
ಈ ಹಿಂದೆ, ಭಾರತೀಯ ಸೇನೆಯು ಗುರುತು, ವೈಯಕ್ತಿಕ ವಿವರಗಳು ಮತ್ತು ಕಾಣೆಯಾದ ಅಪ್ರಾಪ್ತ ಯುವಕನ ಚಿತ್ರವನ್ನು ಚೀನಾಕ್ಕೆ ಹಂಚಿಕೊಂಡಿದೆ ಎಂದು ಅವರು ಹೇಳಿದ್ದಾರೆ. ಮಿರಾಮ್ ಟ್ಯಾರೋನ್ 2022 ರ ಜನವರಿ 18 ರಂದು ಬಿಶಿಂಗ್ ಪ್ರದೇಶದ ಶಿಯುಂಗ್ ಲಾದಿಂದ ನಾಪತ್ತೆಯಾಗಿದ್ದನು. ಅರುಣಾಚಲ ಪ್ರದೇಶದ ತ್ಸಾಂಗ್ಪೋ ನದಿ ಭಾರತವನ್ನು ಪ್ರವೇಶಿಸುವ ಸ್ಥಳದ ಬಳಿ ಈ ಘಟನೆ ನಡೆದಿದೆ ಎಂದು ಸಂಸದರು ಹೇಳಿದ್ದಾರೆ. ತ್ಸಾಂಗ್ಪೋವನ್ನು ಅರುಣಾಚಲ ಪ್ರದೇಶದಲ್ಲಿ ಸಿಯಾಂಗ್ ಮತ್ತು ಅಸ್ಸಾಂನಲ್ಲಿ ಬ್ರಹ್ಮಪುತ್ರ ಎಂದು ಕರೆಯಲಾಗುತ್ತದೆ.