ಕಾಶ್ಮೀರ: ಕೇಂದ್ರಾಡಳಿತ ಪ್ರದೇಶ ಕಾಶ್ಮೀರದಲ್ಲಿನ ಪುಟ್ಟ ಬಾಲಕಿಯೊಬ್ಬಳು ವರಿದಿಗಾರ್ತಿಯಾಗುವುದರೊಂದಿಗೆ ಅಲ್ಲಿನ ಗುಂಡಿ ಬಿದ್ದು, ಕೆಸರು ತುಂಬಿರುವ ರಸ್ತೆಯ ಬಗ್ಗೆ ವಿವರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪುಟ್ಟ ಪೋರಿಯ ನಿರೂಪಣೆ ಶೈಲಿಗೆ ಅನೇಕ ನೆಟ್ಟಿಗರು ಪಿಧಾ ಆಗಿದ್ದಾರೆ.
ಗುಲಾಬಿ ಬಣ್ಣದ ಜಾಕೆಟ್ ಧರಿಸಿರುವ ಲಗುಬಗೆಯಿಂದ ಓಡಾಡುತ್ತಾ, ಕೆಸರು ಬಿದ್ದು ಗದ್ದೆಯಂತಾಗಿರುವ ರಸ್ತೆಗಳ ಪರಿಸ್ಥಿತಿ ಕುರಿತು ವಿವರಿಸಿದ್ದಾಳೆ. ಇದೇ ಕಾರಣಕ್ಕೆ ಇಲ್ಲಿಗೆ ಅತಿಥಿಗಳು ಬರಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿರುವುದು ವಿಡಿಯೋದಲ್ಲಿದೆ.
2.08 ನಿಮಿಷದ ಈ ವಿಡಿಯೋಗೆ 3 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. 705 ರೀ ಟ್ವೀಟ್ ಆಗಿದೆ.