ಕಾಸರಗೋಡು: ಆಜಾದಿ ಕಾ ಅಮೃತ್ ಮಹೋತ್ಸವ್ ಅಂಗವಾಗಿ ವಾರ್ತಾ ಮತ್ತು ಮಾಹಿತಿ ಇಲಾಖೆ ಜಿಲ್ಲಾ ಕಚೇರಿ ವತಿಯಿಂದ ಜಿಲ್ಲೆಯ ಪೌಢಶಾಲಾ ವಿದ್ಯಾರ್ಥಿಗಳಿಗಾಗಿ ದೇಶಭಕ್ತಿಗೀತಾ ಸ್ಪರ್ಧೆ ಜ. 10ರಂದು ಬೆಳಗ್ಗೆ 10ಕ್ಕೆ ಕಾಞಂಗಾಡಿನ ಮಹಾಕವಿ ಪಿ ಸ್ಮಾರಕ ಸಾಂಸ್ಕøತಿಕ ಮಂದಿರದಲ್ಲಿ ಜರುಗಲಿದೆ.
ಸರ್ಕಾರದ ಕೋವಿಡ್ ಮಾನದಂಡ ಪಾಲನೆಯೊಂದಿಗೆ ಕಾರ್ಯಕ್ರಮ ಜರುಗಲಿದೆ. ಮುಂಚಿತವಾಗಿ ನೋಂದಾಯಿಸಿರುವ ಸ್ಪರ್ಧಾಳುಗಳು ನಿಗದಿತ ಸಮಯಕ್ಕೆ ಸಭಾಂಗಣದಲ್ಲಿ ಹಾಜರಿರಬೇಕಾಗಿದೆ. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ( 04994 255145, 9496003201)ಗೆ ಕರೆಮಾಡುವಂತೆ ಪ್ರಕಟಣೆ ತಿಳಿಸಿದೆ.