ತಿರುವನಂತಪುರಂ: ಕೇರಳ ಪೋಲೀಸರನ್ನು ಸಾಮಾಜಿಕ ಜಾಲತಾಣಗಳು ಟ್ರೋಲ್ ಮಾಡಿದ್ದು, ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಜನರು ಜಾಗರೂಕರಾಗಿರಿ ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಸಲಹೆ ನೀಡಿದ್ದಾರೆ. ಕೇರಳ ಪೊಲೀಸರ ಫೇಸ್‍ಬುಕ್ ಪುಟದಲ್ಲಿ ಜನರು ಟೀಕೆಗಳನ್ನು ಮಾಡಿದ್ದಾರೆ. ತಿರುವಾದಿರ ಮತ್ತು ಸಮಾವೇಶವನ್ನು ನಡೆಸಲು ಬೆಂಬಲ ನೀಡುವ ಪೋಲೀಸರು ಇನ್ನು ಕೊರೊನಾ ಸಿಕ್ಕಿಬಿಟ್ಟರೆ ಜನರ ಮೇಲೆರಗುವರು ಎಂಬ ವಿಮರ್ಶೆಗಳು ಟ್ರೋಲ್ ನಲ್ಲಿ ಭಾರೀ ಸದ್ದುಮಾಡಿದೆ.
ಕೇರಳ ಪೋಲೀಸರು ‘ಮಾಸ್ಕ್ ಮಾತ್ರ ಸಾಕಾಗುವುದಿಲ್ಲ ಮತ್ತು ಕೋವಿಡ್‍ನ ಬೇರುಗಳನ್ನು ಮಟ್ಟಹಾಕಲು ಸಾಮಾಜಿಕ ಅಂತರದ ಅಗತ್ಯವಿದೆ’ ಎಂದು ಹಂಚಿಕೊಂಡಿದ್ದಾರೆ. ಪ್ರತಿಕ್ರಿಯೆಯಾಗಿ, ಜನರು ಕಾಮೆಂಟ್ ಬಾಕ್ಸ್ ಅನ್ನು ಟ್ರೋಲ್ ಪ್ರತಿಭಟನೆ ಮೂಲಕ ಗೇಲಿಮಾಡಿದ್ದಾರೆ.
ಮುಖ್ಯಮಂತ್ರಿಗಳು, ಅವರ ಪಕ್ಷದವರು ಹಾಗೂ ಪಕ್ಷದ ಸಮಾವೇಶ ನಡೆಸುವವರಿಗೆ ಅರಿವು ಮೂಡಿಸಬೇಕು’ ಎಂದು ಹಲವರು ಕಾಮೆಂಟ್ ಬರೆದಿದ್ದಾರೆ. ‘ಇನ್ನೂ ನಡೆಯುತ್ತಿರುವ ಪಕ್ಷದ ಸಭೆ, ನೂರಾರು ಜನ ಸೇರಿ ನಡೆಸುವ ತಿರುವಾದಿರ ಇವೆಲ್ಲ ಮಂಗಳ ಗ್ರಹದಲ್ಲಿ ನಡೆಯುತ್ತಿದೆ’ ಎಂದು ವ್ಯಾಪಕ ಕಮೆಂಟ್ ಗಳು ವ್ಯಕ್ತ್ತವಾಗಿದೆ ಎಂದು ಪೊಲೀಸರೂ ತಿಳಿಸಿದ್ದಾರೆ.
ಪಾರ್ಟಿ ಸಮ್ಮೇಳನ ನಡೆಸಬಹುದು, ತಿರುವಾದಿರ ನೃತ್ಯವೂ ಆಗಬಹುದು, ಪಕ್ಷದವರು ಆಚೀಚೆ ಕೈಮಿಸಲಾಯಿಸಲೂ ಸಾಧ್ಯ. ಆದರೆ ಜನಸಾಮಾನ್ಯರು ಮಾತ್ರ ಇದ್ಯಾವುದೂ ಬಾÀಧಕರಲ್ಲ. ಜನ ಸಾಮಾನ್ಯರಿಗೆ ಅನ್ನ ಕೊಡಬೇಡಿ ಸಾರ್ ಎಂದು ಕೇಳುತ್ತಿದ್ದಾರೆ? ವಲಸಿಗರು ಮತ್ತು ಸಾಮಾನ್ಯ ಜನರು ಮಾತ್ರ ಭಯಪಡಬೇಕು ಮತ್ತು ಪಾರ್ಟಿ ಸಮಮೇಳನಕ್ಕೆ ಹೋಗುವವರಿಗೆ ಯಾವ ಭಯವೂ, ಕಾನೂನು ಕಟ್ಟಳೆಗಳೂ ಇಲ್ಲ ಎಂಬ ಪ್ರತಿಭಟನಾತ್ಮಕ ಪ್ರಶ್ನೆಗಳೂ ವ್ಯಕ್ತಗೊಂಡಿದೆ.
ಕೊರೋನಾ ಉತ್ತುಂಗಕ್ಕೇರಿದಾಗಲೂ, ಸಿಪಿಎಂ ಪಕ್ಷದ ಸಮಾವೇಶವನ್ನು ಆಯೋಜಿಸಿರುವುದು ಮತ್ತು ತಿರುವಾದಿರ ನೃತ್ಯ ಆಯೋಜಿಸಿರುವ ಬಗ್ಗೆ ಟೀಕಿಸಲಾಗಿದೆ. ಪಕ್ಷದವರು ಏನೇ ಮಾಡಿದರೂ ಕೈ ಕಟ್ಟಿ ಕುಳಿತಿರುವ, ಜನಸಾಮಾನ್ಯರು ಕುಳಿತಲ್ಲಿಂದ ಅಲುಗಾಡಿದರೂ ಥಳಿಸುವ ಪೊಲೀಸರನ್ನು ವ್ಯಾಪಕವಾಗಿ ಟೀಕಿಸಲಾಗಿದೆ.