ತಿರುವನಂತಪುರಂ: ಕೇಂದ್ರೀಯ ತನಿಖಾ ಸಂಸ್ಥೆ ಎನ್ಐಎ ಕೋಯಿಕ್ಕೋಡ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿದ್ದ ತೀರ್ಪನ್ನು ಕೇರಳ ಹೈಕೋರ್ಟ್ ಬದಲಾಯಿಸಿದೆ.
ಎನ್ಐಎ ಕೋರ್ಟ್ ಅಪರಾಧಿಗಳೆಂದು ನೀಡಿದ್ದ ತೀರ್ಪನ್ನು ಕೇರಳ ಹೈಕೋರ್ಟ್ ರದ್ದುಗೊಳಿಸಿದ್ದು, ಅಪರಾಧಿಗಳನ್ನು ನಿರ್ದೋಷಿಗಳೆಂದು ತೀರ್ಪು ಪ್ರಕಟಿಸಿದೆ. 2011 ರಲ್ಲಿ ಎನ್ಐಎ ಆರೋಪಿಗಳನ್ನು ಅಪರಾಧಿಗಳೆಂದು ತೀರ್ಪು ಪ್ರಕಟಿಸಿತ್ತು.
ನಜೀರ್ ಎಂಬಾತ ಎನ್ಐಎ ವಿಶೇಷ ನ್ಯಾಯಾಲಯ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ ಆತ ಹಾಗೂ ಮತ್ತೋರ್ವ ಆರೋಪಿಯನ್ನು ನಿರ್ದೋಷಿ ಎಂದು ಹೇಳಿದೆ.
ನಾಜಿರ್ ಮತ್ತು ಆತನ ಸಹಚರನನ್ನು ಕೋಯಿಕ್ಕೋಡ್ ನ ಕೆಎಸ್ ಆರ್ ಟಿಸಿ ಹಾಗೂ ಮೊಫುಸಿಲ್ ಬಸ್ ನಿಲ್ದಾಣಗಳಲ್ಲಿ 2006 ರ ಮಾ.3 ರಂದು ಬಾಂಬ್ ಸ್ಫೋಟಕ್ಕೆ ಯೋಜಿಸಿದ್ದ ಆರೋಪದಡಿ ಬಂಧಿಸಲಾಗಿತ್ತು.