ಕಾಸರಗೋಡು: ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಕಾರಡ್ಕ ಅರಣ್ಯ ಸತ್ಯಾಗ್ರಹ ಸ್ಮರಣಾರ್ಥ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಜಿಲ್ಲಾ ಮಾಹಿತಿ ಕಛೇರಿಯ ಆಶ್ರಯದಲ್ಲಿ ಕಾಸರಗೋಡು ಜಿಲ್ಲೆಯ ಯುಪಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಿತ್ತು. ಕ್ವಿಜ್ ಸ್ವಾತಂತ್ರ್ಯ ಹೋರಾಟ ಮತ್ತು ಕಳೆದ 75 ವರ್ಷಗಳ ಸಾಗಿಬಂದ ದಾರಿಗಳ ಮೇಲೆ ನಡೆಯಿತು. ಬೇತೂರು ಪಾರ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳಾದ ಆದರ್ಶ್ ಮತ್ತು ಶಿವಾನಂದ್ ಪ್ರಥಮ ಹಾಗೂ ಕಳಿಯೂರು ಸೇಂಟ್ ಜೋಸೆಫ್ ಎಯುಪಿ ಶಾಲೆಯ ಪೂಜಾಲಕ್ಷ್ಮಿ ದ್ವಿತೀಯ ಸ್ಥಾನ ಪಡೆದರು. ಅಡೂರು ಜಿಎಚ್‌ಎಸ್‌ಎಸ್‌ನ ಆರ್ದ್ರ ಪಿವಿ ಮತ್ತು ಶ್ರೇಯಾ ಮೋಲ್ ತೃತೀಯ ಸ್ಥಾನ ಪಡೆದರು. 26 ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎನ್. ನಿರ್ಮಲ್ ಕುಮಾರ್ ಕಾರಡ್ಕ ಮತ್ತು ಆದರ್ಶ್ ನಿರ್ವಹಿಸಿದರು. ವಿಜೇತರಿಗೆ ಡಿಡಿ ಇಕೆವಿ ಪುಷ್ಪಾ ಬಹುಮಾನಗಳನ್ನು ವಿತರಿಸಿದರು.