ಪಾಲಕ್ಕಾಡ್: ಪ್ರಾಚೀನ ವಿಚಾರಗಳು ಮತ್ತು ವಿಧಾನಗಳನ್ನು ಬದಲಾಯಿಸುವ ಮೂಲಕ ಕೇರಳದಲ್ಲಿ ಲಿಂಗ ತಟಸ್ಥ ಸಮವಸ್ತ್ರವನ್ನು ಜಾರಿಗೆ ತರಲಾಯಿತು. ಹಳೆಯ ಸಂಪ್ರದಾಯಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಪ್ರಗತಿಪರ ಚಿಂತನೆಗಳೊಂದಿಗೆ ಮುನ್ನಡೆಯುತ್ತಿರುವ ಬಾಳುಶ್ಶೇರಿಯ ಸÀರ್ಕಾರಿ ಹೈಯರ್ ಸೆಕೆಂಡರಿ ಶಾಲೆಗೆ ಹಲವಾರು ಮಂದಿ ಬೆಂಬಲವಾಗಿ ನಿಂತರು. ಇದರ ಬೆನ್ನಲ್ಲೇ ಪಾಲಕ್ಕಾಡ್ ನ ಮತ್ತೊಂದು ಶಾಲೆ ಈಗ ವಿನೂತನ ಐಡಿಯಾವೊಂದನ್ನು ಪ್ರಕಟಿಸಿದೆ. ಈ ಶಾಲೆಯಲ್ಲಿ ಸರ್, ಮೇಡಂ ಪದಗಳನ್ನು ಇನ್ನು ಬಳಸುವಂತಿಲ್ಲ. ಬದಲಿಗೆ ಶಿಕ್ಷಕರನ್ನು ಶಿಕ್ಷಕರೆಂದು ಕರೆಯಬೇಕು ಎಂದು ನಿಯಮ ವಿಧಿಸಲಾಗಿದೆ.
ಪಾಲಕ್ಕಾಡ್ ನ ಓಲಸ್ಸೆರಿ ಗ್ರಾಮದ ಸರ್ಕಾರಿ ಅನುದಾನಿತ ಶಾಲೆಯಾದ ಹಿರಿಯ ಮೂಲ ಶಾಲೆಯು ಪ್ರಗತಿಪರ ಹೆಜ್ಜೆಯೊಂದಿಗೆ ಮುಂದೆ ಬಂದಿದೆ. ಶಿಕ್ಷಕರನ್ನು ಶಿಕ್ಷಕರೇ ಎಂಬ ಒಂದೇ ಪದದಲ್ಲಿ ಸಂಬೋಧಿಸಲು ತೀರ್ಮಾನಿಸಲಾಗಿದೆ. ಶಾಲಾ ಶಿಕ್ಷಕ ವೃಂದ ಈ ನಿರ್ಧಾರ ಪ್ರಕಟಿಸಿರುವರು. ವಿದ್ಯಾರ್ಥಿಗಳು ಮತ್ತು ಪೋಷಕರು ಇದನ್ನು ಸ್ವಾಗತಿಸಿದ್ದಾರೆ.
ಭವಿಷ್ಯದ ಪೀಳಿಗೆಗೆ ತಡೆರಹಿತ ವಾತಾವರಣವನ್ನು ಅನುಭವಿಸಲು ಅನುವು ಮಾಡಿಕೊಡಲು ಈ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಶಾಲೆಯ ಅಧಿಕಾರಿಗಳು ಹೇಳುತ್ತಾರೆ. ಒಲಸ್ಸೆರಿ ಸರ್ಕಾರಿ ಅನುದಾನಿತ ಶಾಲೆ ಕೇರಳದಲ್ಲಿ ಇಂತಹ ಕಾನೂನು ಜಾರಿಗೆ ತಂದ ಮೊದಲ ಶಾಲೆಯಾಗಿದೆ.