ತಿರುವನಂತಪುರ: ರಾಜ್ಯದಲ್ಲಿ ಇಂದು 51,739 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ: ಎರ್ನಾಕುಳಂ 9708, ತಿರುವನಂತಪುರ 7675, ಕೋಝಿಕ್ಕೋಡ್ 5001, ಕೊಲ್ಲಂ 4511, ತ್ರಿಶೂರ್ 3934, ಕೊಟ್ಟಾಯಂ 3834, ಪಾಲಕ್ಕಾಡ್ 3356, ಮಲಪ್ಪುರಂ 2855, ಅಲಪ್ಪುಳ 2291, ಕಣ್ಣೂರು 252, ಪತ್ತನಂತಿಟ್ಟ 2063, ಇಡುಕ್ಕಿ 1986, ವಯನಾಡ್ 1344, ಕಾಸರಗೋಡು 1029 ಎಂಬಂತೆ ಸೋಂಕು ದೃಢಪಟ್ಟಿದೆ.
ಕಳೆದ 24 ಗಂಟೆಗಳಲ್ಲಿ 1,16,003 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಸಾಪ್ತಾಹಿಕ ಸೋಂಕಿನ ಜನಸಂಖ್ಯೆಯ ಅನುಪಾತ 10 ಕ್ಕಿಂತ ಹೆಚ್ಚಿನ 5 ಸ್ಥಳೀಯಾಡಳಿತ ಪ್ರದೇಶಗಳಲ್ಲಿ 6 ವಾರ್ಡ್‍ಗಳಿವೆ. ಇಲ್ಲಿ ಕಟ್ಟುನಿಟ್ಟಿನ ನಿಯಂತ್ರಣ ಇರಲಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 4,68,717 ಮಂದಿ ಜನರು ನಿಗಾದಲ್ಲಿದ್ದಾರೆ. ಇವರಲ್ಲಿ 4,57,490 ಮಂದಿ ಮನೆ/ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿದ್ದಾರೆ ಮತ್ತು 11,227 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು 1301 ಮಂದಿ ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪ್ರಸ್ತುತ 3,09,489 ಕೊರೋನಾ ಪ್ರಕರಣಗಳಲ್ಲಿ, ಕೇವಲ 3.6 ಪ್ರತಿಶತದಷ್ಟು ಜನರು ಆಸ್ಪತ್ರೆ / ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ ಕೋವಿಡ್ ಬಾಧಿಸಿ 11 ಮಂದಿ ಮೃತರಾಗಿದ್ದಾರೆ. ಇದಲ್ಲದೆ, ಸುಪ್ರೀಂ ಕೋರ್ಟ್‍ನ ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಕೇಂದ್ರ ಸರ್ಕಾರವು ಮೇಲ್ಮನವಿ ಸಲ್ಲಿಸಿದ 57 ಸಾವುಗಳು ವರದಿಯಾಗಿವೆ. ಹಿಂದಿನ ದಿನಗಳಲ್ಲಿ 85 ಸಾವುಗಳು ವರದಿಯಾಗಿವೆ. ಆದರೆ ದಾಖಲೆಗಳು ತಡವಾಗಿ ಸ್ವೀಕರಿಸಿದ ಕಾರಣ ಇವುಗಳು ನಿನ್ನೆ ವರದಿಯಾಗಿರಲಿಲದ್ಲ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 52,434ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕು ಪತ್ತೆಯಾದವರಲ್ಲಿ 237 ಮಂದಿ ಜನರು ಹೊರ ರಾಜ್ಯದವರು. ಸಂಪರ್ಕದ ಮೂಲಕ 47,490 ಮಂದಿ ಜನರು ಸೋಂಕಿಗೆ ಒಳಗಾಗಿದ್ದಾರೆ. 3548 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಇಂದು 464 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ದೃಢ|ಪಡಿಸಲಾಗಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದವರಲ್ಲಿ 42,653 ಮಂದಿ ಚೇತರಿಸಿಕೊಂಡಿದ್ದಾರೆ. ತಿರುವನಂತಪುರ 5814, ಕೊಲ್ಲಂ 2940, ಪತ್ತನಂತಿಟ್ಟ 548, ಆಲಪ್ಪುಳ 1264, ಕೊಟ್ಟಾಯಂ 3275, ಇಡುಕ್ಕಿ 616, ಎರ್ನಾಕುಲಂ 12,102, ತ್ರಿಶೂರ್ 4989, ಪಾಲಕ್ಕಾಡ್ 1895, ಮಲಪ್ಪುರಂ 1897, ಕೀಝಿಕ್ಕೋಡ್ 4012, ವಯನಾಡ್ 810, ಕಣ್ಣೂರು 1973, ಕಾಸರಗೋಡು 517 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ 3,09,489 ಮಂದಿ ಜನರಿಗೆ ಕೋವಿಡ್ ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 54,63,960 ಮಂದಿ ಜನರು ಕೊರೋನಾದಿಂದ ಮುಕ್ತರಾಗಿದ್ದಾರೆ.